ಸಿಯೋಲ್ : ಉತ್ತರ ಕೊರಿಯಾ ಶನಿವಾರ ಮುಂಜಾನೆ ಕೊರಿಯನ್ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯ ಸಮುದ್ರದ ಕಡೆಗೆ ಹಲವಾರು ಕ್ರೂಸ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಉಡಾವಣೆಯ ವಿವರಗಳನ್ನು ದಕ್ಷಿಣ ಕೊರಿಯಾ ಮತ್ತು ಯುಎಸ್ ಗುಪ್ತಚರ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಟಾಪ್ ಬ್ಯಾಂಕರ್ ಆಗಿ ಸ್ಥಾನ ಪಡೆದ ಆರ್‌ಬಿಐ ಅಧ್ಯಕ್ಷ : ಅಭಿನಂದಿಸಿದ ಪಿಎಂ ಮೋದಿ
ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿ ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ) ದಾಳಿ ನಡೆಸಿದೆ ಎಂದು ಉತ್ತರ ಕೊರಿಯಾದ ರಾಜ್ಯ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಹೇಳಿದೆ.
ಕಳೆದ ತಿಂಗಳು ಉತ್ತರ ಕೊರಿಯಾದ ಬಾಹ್ಯಾಕಾಶ ರಾಕೆಟ್‌ನ ಉಡಾವಣೆಗೆ ಪ್ರತಿಕ್ರಿಯೆಯಾಗಿ ಸಿಯೋಲ್ (ದಕ್ಷಿಣ ಕೊರಿಯಾ) ಐದು ಉತ್ತರ ಕೊರಿಯಾದ ವ್ಯಕ್ತಿಗಳು ಮತ್ತು ಒಂದು ಕಂಪನಿಯ ಮೇಲೆ ಶುಕ್ರವಾರ ನಿರ್ಬಂಧ ವಿಧಿಸಿದೆ.
ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾ ಪ್ರದೇಶಗಳನ್ನು ಆಕ್ರಮಿಸುವ ಗುರಿಯೊಂದಿಗೆ ಮಿಲಿಟರಿ ಕಮಾಂಡ್ ತಾಲೀಮು ನಡೆಸುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.