ಶಿವಮೊಗ್ಗ: ಪ್ರಧಾನಿಯವರೇ, ಸೊರಬ ಶಾಸಕ ಕುಮಾರ ಬಂಗಾರಪ್ಪಗೆ ಟಿಕೆಟ್ ನೀಡಬೇಡಿ ಎಂದು ಕಾರ್ಯಕರ್ತರೊಬ್ಬರು ಪತ್ರ ಬರೆದಿದ್ದಾರೆ,
ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದು,ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ, ಸೊರಬ ತಾಲೂಕು ದ್ವಾರಹಳ್ಳಿಯ ನಿವಾಸಿ, ಬಿಜೆಪಿಯ ಕಾರ್ಯಕರ್ತ ಯುವರಾಜ ವೀರಪ್ಪ ಎಂಬುವವರು ಬರೆದಿದ್ದಾರೆ.


ಸೊರಬದ ಹಾಲಿ ಶಾಸಕ ಕುಮಾರ ಬಂಗಾರಪ್ಪನವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂದು ಮನವಿ ಮಾಡಿದ್ದಾರೆ. ”ನಾನು ಬಿಜೆಪಿಗೆ 19 ವರ್ಷಗಳಿಂದ ಕಾರ್ಯಕರ್ತನಾಗಿದ್ದೇನೆ. ಈ ಬಾರಿ ಹಾಲಿ ಶಾಸಕ ಕುಮಾರ ಬಂಗಾರಪ್ಪನವರಿಗೆ ನೀಡದೆ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಸೊರಬದ ಬಿಜೆಪಿಯ ಹಿರಿಯ ಮುಖಂಡರು ಕುಮಾರ್ ಬಂಗಾರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಟಿಕೆಟ್ ನೀಡದಂತೆ ತಾಲೂಕಿನ ಆನವಟ್ಟಿಯಲ್ಲಿ ಬೈಕ್ ರ್ಯಾಲಿ ನಡೆಸಿದ್ದರು.