ದೆಹಲಿ : ನಾನ್ಯಾವತ್ತು ಪ್ರತ್ಯೇಕವಾಗಿ ಪ್ರಧಾನಿ ಭೇಟಿಯಾಗಲ್ಲ, ಬಿಜೆಪಿ ಮೈತ್ರಿ ವಿಚಾರವಾಗಿ ನಾನು ಯಾರನ್ನು ಭೇಟಿಯಾಗಲ್ಲ ಚರ್ಚೆಗೆ ಬಂದಾಗ ಮಾತಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಬಿಜೆಪಿ – ಜೆಡಿಎಸ್ ಮೈತ್ರಿ ಮೈತ್ರಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಎಲ್ಲಿದ್ದೇವೆ ಅಲ್ಲೆ ಇರ್ತಿವಿ , ಈಗ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ ಕುಮಾರಸ್ವಾಮಿ ಬರೋ ವಿಚಾರ ಸಹ ನನಗೆ ಗೊತ್ತಿಲ್ಲ, ಯಾವ ಮೈತ್ರಿ ಬಗ್ಗೆಯೂ ಸಹ ನಾನು ಚರ್ಚೆ ಮಾಡೋಲ್ಲ, ಕಾವೇರಿ ವಿಚಾರವಾಗಿ ಸಹ ನಾನು ಪ್ರಧಾನಿಯವರನ್ನು ಭೇಟಿ ಆಗೋಲ್ಲ, ಪ್ರಧಾನಿಯವರನ್ನು ಭೇಟಿಯಾದ್ರೆ ಮೈತ್ರಿ, ಸೀಟ್ ಹಂಚಿಕೆ ಅಂತ ಆಗುತ್ತೆ, ಅದಕ್ಕೆ ಯಾವುದೇ ಕಾರಣಕ್ಕೂ ನಾನು ಮೋದಿ ಅವ್ರನ್ನ ಭೇಟಿ ಆಗೋಲ್ಲ ಎಂದು ತಿಳಿಸಿದರು.
ದೆಹಲಿಯಲ್ಲಿ ದೇವೇಗೌಡರು ಮೋದಿ ಭೇಟಿಯಾಗಲ್ಲ ಎಂದು ಗೌಡರು ಸ್ಪಷ್ಟವಾಗಿ ಹೇಳಿದ್ದು,ಯಡಿಯೂರಪ್ಪ ಮದರಿಯಲ್ಲೇ ಯೂಟರ್ನ್ ಹಾಕಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರ ಜೊತೆ ಬುಧವಾರ ಕುಮಾರಸ್ವಾಮಿ ಮಾತುಕತೆ ಮಾಡಲಿದ್ದಾರೆ. ಸದ್ಯ ವಿಶೇಷ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಜೆಡಿಎಸ್ ವರಿಷ್ಠರು ಮೋದಿ ಭೇಟಿ ಮಾಡದಿರಲು ನಿರ್ಧರಿಸಿದ್ದಾರೆ.
ಒಂದು ವೇಳೆ, ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡರೆ, ಕಾಂಗ್ರೆಸ್ ಲೆಕ್ಕಾಚಾರಗಳು ತಲೆಕೆಳಗಾಗಬಹುದು ಎಂದು ಹೇಳಲಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಇಬ್ಬರು ನಾಯಕರ ನಿರ್ಧಾರವನ್ನು ರಾಜ್ಯ ಬಿಜೆಪಿ ನಾಯಕರು ಒಪ್ಪಲಿದ್ದಾರೆ ಎಂದು ಬಿಎಸ್‌ವೈ ತಿಳಿಸಿದ್ದರು.
ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮೈತ್ರಿ ನಿರ್ಧಾರದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು ದಳಪತಿಗಳು. ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಈ ಸಂಬಂಧಿಸಿದಂತೆ ಭೇಟಿ ಮಾಡಿದ್ದು ನಿಜ ಎಂದೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಕೂಡಾ ಖಚಿತಪಡಿಸಿದ್ದರು. ಇವರಷ್ಟೇ ಅಲ್ಲ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕೂಡಾ ಬಿಜೆಪಿ ಜೊತೆಗೆ ಜನ ಹಿತಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿಕೊಂಡಿದ್ದರು. ಮೈತ್ರಿ ವಿಚಾರ ದಿನದಿಂದ ದಿನಕ್ಕೆ ಕುತೂಹಲಕಾರಿಯಾಗಿದ್ದು, ಮುಂದೇನಾಗುತ್ತೆ ಕಾದುನೋಡಬೇಕಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.