Sunday, March 26, 2023
spot_img
- Advertisement -spot_img

ಪಿಂಪ್‌ ಗಳಿಂದ ಹಣ ಮಾಡಿಕೊಳ್ಳುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ : ಗೃಹ ಸಚಿವ ಆರಗ ಜ್ಞಾನೇಂದ್ರ


ಶಿವಮೊಗ್ಗ : ಪಿಂಪ್‌ ಗಳಿಂದ ಹಣ ಮಾಡಿಕೊಳ್ಳುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದ ಬಂಟರ ಭವನದಲ್ಲಿ ತೀರ್ಥಹಳ್ಳಿ ಬಿಜೆಪಿ ಮಂಡಲದ ವತಿಯಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಯಾಂಟ್ರೋ ರವಿ ಯಾರೆಂಬುದೇ ನನಗೆ ಗೊತ್ತಿಲ್ಲ, ನನ್ನ ಮನೆಗೆ ಸಾವಿರಾರು ಜನರು ಬಂದು ಹೋಗ್ತಾರೆ, ಎಲ್ಲರ ಕ್ಯಾರೆಕ್ಟರ್ ಸರ್ಟೀಫೀಕೆಟ್ ನೋಡಿ ಒಳಗೆ ಬಿಡಲು ಆಗಲ್ಲ , ವಿನಾಕಾರಣ ನನ್ನ ಹೆಸರು ಹೆಳಿ ಗೊಂದಲ ಸೃಷ್ಟಿಸಿರೋದು ಸರಿಯಲ್ಲ ಎಂದು ಹೇಳಿದ್ದಾರೆ.

ಗೃಹ ಸಚಿವರು ಗುಜರಾತ್ ಗೆ ಹೋಗಿದ್ದಾಗ ಗುಜರಾತ್ ನಲ್ಲೂ ಸ್ಯಾಂಟ್ರೋ ರವಿ ಬಂಧನ ಅನುಮಾನ ತಂದಿದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕಿಡಿಕಾರಿದರು. ಗುಜರಾತ್ ನಲ್ಲಿ ನನ್ನ ಕಾರ್ಯಕ್ರಮ 6 ತಿಂಗಳ ಹಿಂದೆ ನಿಗದಿಯಾಗಿತ್ತು. ನಾನು ಎಲ್ಲಿಗೆ ಹೋಗಿದ್ದೆ ಎಂಬ ಬಗ್ಗೆ ಮಾಹಿತಿ ಸರ್ಕಾರದ ಬಳಿ ಇರುತ್ತದೆ, ಕುಮಾರಸ್ವಾಮಿಯವರ ಆರೋಪದಲ್ಲಿ ಹುರುಳಿಲ್ಲ ಎಂದು ಆರೋಪಿಸಿದ್ದಾರೆ.

ಕಿಮ್ಮನೆ ರತ್ನಾಕರ್ ಈಗ ತೀರ್ಥಹಳ್ಳಿಯಲ್ಲಿ ಸವೆದುಹೋದ ನಾಣ್ಯವಾಗಿದ್ದಾರೆ, ಅವರ ಪಕ್ಷದ ಕಾರ್ಯಕರ್ತರೇ ಕಿಮ್ಮನೆ ನಾಯಕತ್ವ ಒಪ್ಪದೆ ಬೇಷರತ್ ಆಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇದರಿಂದ ಅವರು ಕಂಗೆಟ್ಟು ಹೋಗಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಸಂಬದ್ಧವಾಗಿ ಮಾತಾಡುವ ಸ್ಥಿತಿ ತಲುಪಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ವಿರುದ್ದ ಗರಂ ಆದರು.

Related Articles

- Advertisement -

Latest Articles