ಮೈಸೂರು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ದೇಶಾದ್ಯಂತ ಬಿಜೆಪಿ ಪಕ್ಷದ ವತಿಯಿಂದ ಸೇವಾ ಹೀ ಸಂಘಟನ ಅಭಿಯಾನಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಇಂದು ಚಾಮುಂಡಿ ದೇವಿಗೆ ಮೋದಿ ಅವರ ಆಯುಷ್ಯವೃದ್ದಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.
ಕಾರ್ಯಕರ್ತರೊಂದಿಗೆ ತೆರಳಿದ್ದ ಸಂಸದರು ಈಡುಗಾಯಿ ಒಡೆದು ಸಿಹಿ ಹಂಚಿ ಸಂಭ್ರಮಿಸಿ ಮೋದಿಯವರಿಗೆ ಜೈಕಾರ ಹಾಕಿದ್ದಾರೆ.
ಇದನ್ನೂ ಓದಿ : ಪ್ರಧಾನಿಯಿಂದ ಇಂದು ‘ಯಶೋಭೂಮಿ’ ಕನ್ವೆನ್ಷನ್ ಸೆಂಟರ್ ಲೋಕಾರ್ಪಣೆ : ಏನಿದರ ವಿಶೇಷತೆ?
ಬಳಿಕ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕುರುಬರಹಳ್ಳಿಯ ಪೌರಕಾರ್ಮಿಕರ ಕಾಲೋನಿಯಲ್ಲಿ ಜರುಗಿದ ಪೌರಕಾರ್ಮಿಕರಿಗೆ ಗೌರವ ವಂದನೆ ಸಲ್ಲಿಸುವ ಸೇವಾ ಪಾಕ್ಷಿಕ ಕಾರ್ಯಕ್ರಮಕ್ಕೆ ಪೌರಕಾರ್ಮಿಕರ ಪಾದಪೂಜೆ ಮಾಡುವ ಮೂಲಕ ಪ್ರತಾಪ್ ಸಿಂಹ ಚಾಲನೆ ನೀಡಿದರು.


ಪಾದಪೂಜೆ ಮಾಡುವ ಮೂಲಕ ಪೌರ ಕಾರ್ಮಿಕರ ಕಾರ್ಯವನ್ನು ಸ್ಮರಿಸಿ ಅವರಿಗೆ ಗೌರವಿಸಿದ ಅವರು ಕಾರ್ಮಿಕರ ಸೇವೆಯನ್ನು ಶ್ಲಾಘಿಸಿದರು. ಈ ಸೇವಾ ಪಾಕ್ಷಿಕವು ಒಂದು ವಾರಗಳ ಕಾಲ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ವಿಶೇಷ ಅಭಿಯಾನವಾಗಿದೆ.
ಸಂಸದ ಪ್ರತಾಪ್ ಸಿಂಹರಿಗೆ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಮತ್ತು ಮೇಯರ್ ಶಿವಕುಮಾರ್ ಸೇರಿದಂತೆ ಹಲವರು ಸಾಥ್ ನೀಡಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.