ನವದೆಹಲಿ : ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿಯ ಏಳು ವಿಕೆಟ್‌ಗಳ ಸಾಧನೆಯನ್ನು ಭಾರತ ಸಂಭ್ರಮಿಸುತ್ತಿದೆ. ಈ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಇಂದು ಶಮಿ ಪ್ರದರ್ಶನವನ್ನು ಕೊಂಡಾಡುತ್ತಿರುವ ಕೆಲವರು, 2021ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಸೋತಿದ್ದಕ್ಕೆ ಶಮಿಯನ್ನು ಹೀನಾಯವಾಗಿ ಟ್ರೋಲ್ ಮಾಡಿದ್ದರು ಎಂದು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತ ಸೋತಾಗ ಹಿಂದೂ-ಮುಸ್ಲಿಂ ಅಮಲಿನಲ್ಲಿ ಕೆಲವರು ಶಮಿಯನ್ನು ಟ್ರೋಲ್ ಮಾಡಿದ್ದರು. ಆಗ ರಾಹುಲ್ ಗಾಂಧಿ ಮಾತ್ರ ಶಮಿ ಜೊತೆ ನಿಂತಿದ್ದರು. “ಮೊಹಮ್ಮದ್ ಶಮಿ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಈ ಜನರು ದ್ವೇಷದಿಂದ ತುಂಬಿದ್ದಾರೆ. ಏಕೆಂದರೆ ಅವರು ಯಾರಿಗೂ ಪ್ರೀತಿಸೋದು ಗೊತ್ತಿಲ್ಲ, ಕ್ಷಮಿಸಿ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು ಎಂದು ಬಿ.ವಿ ಶ್ರೀನಿವಾಸ್ ನೆನಪಿಸಿಕೊಂಡಿದ್ದಾರೆ.
2021ರಲ್ಲಿ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಸೋತ ನಂತರ ಸಾಮಾಜಿಕ ಮಾಧ್ಯಮ ಟ್ರೋಲ್‌ಗಳು ಶಮಿಯನ್ನು ಅವರ ಧರ್ಮಕ್ಕಾಗಿ ಗುರಿಯಾಗಿಸಿದ್ದವು. ಈ ವೇಳೆ ರಾಹುಲ್ ಗಾಂಧಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಕೆಲ ಪ್ರಮುಖರು ಶಮಿ ವಿರುದ್ಧದ ಟ್ರೋಲ್‌ಗಳನ್ನು ಖಂಡಿಸಿದ್ದರು ಮತ್ತು ಶಮಿಗೆ ಬೆಂಬಲ ನೀಡಿದ್ದರು.
ಇದನ್ನೂ ಓದಿ : ಹಲೋ ಅಪ್ಪ.. ನಾನು ಕೊಟ್ಟಿರೋ 4-5 ಮಾತ್ರ ಮಾಡಿ: ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್
ಏಕದಿನ ವಿಶ್ವಕಪ್ 2023ರ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಬ್ಬರದ ಬೌಲಿಂಗ್ ದಾಳಿ ನಡೆಸಿ 7 ವಿಕೆಟ್ ಕಬಳಿಸಿದ ಭಾರತದ ವೇಗಿ ಮೊಹಮ್ಮದ್ ಶಮಿ ದಾಖಲೆ ಬರೆದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.