ಚಿಕ್ಕಮಗಳೂರು: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಕಡೂರಿನಲ್ಲೂ ಸಹ ಮತ್ತೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ನಮ್ಮ ಶ್ರಮ ನಿರಂತರ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ, ಕಡೂರಿನ ನಂದಿ ಕ್ರೀಡಾ ಭವನದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಡೂರು ಕ್ಷೇತ್ರದ ಜನರು ದೇವೇಗೌಡರನ್ನು, ಪ್ರಜ್ವಲ್ ಅವರ ಕೈ ಹಿಡಿದಿದ್ದಾರೆ. ಕ್ಷೇತ್ರದ ಮತದಾರರ ಋಣ ನಮ್ಮ ಮೇಲಿದೆ. ಕಡೂರು ಕ್ಷೇತ್ರವನ್ನು ಮತ್ತೆ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳುವುದು ನಮ್ಮ ಗುರಿ ಎಂದರು.
ದೇವೇಗೌಡರು ಕ್ಷೇತ್ರಕ್ಕೆ ಏನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ನಾಗರಿಕರಿಗೆ ನೆಮ್ಮದಿಯಾಗಿ ಬದುಕಲು ಬೇಕಾದ ಸೌಲಭ್ಯಗಳನ್ನು ನೀಡುವ ಆಶಯ ಕುಮಾರಸ್ವಾಮಿ ಅವರದ್ದು, ಅದರ ಭಾಗವೇ ಪಂಚರತ್ನ ಯಾತ್ರೆ. ಅದು ಸಾಕಾರ ವಾಗುತ್ತದೆ ಎನ್ನವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.
ಗೌಡರ ಅನುದಾನ ಮತ್ತು ನಾನು ಸಚಿವನಾಗಿದ್ದಾಗ ಕ್ಷೇತ್ರಕ್ಕೆ 250 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೆವು. ಈ ಹಿಂದೆ ಕೆ.ಎಂ. ಕೃಷ್ಣಮೂರ್ತಿ, ಧರ್ಮೇಗೌಡರ ಕೊಡುಗೆಯನ್ನು ಜನ ಮರೆತಿಲ್ಲ ಎಂದರು.