ಬೀದರ್ : ರಾಜ್ಯಕ್ಕೆ ಒಳ್ಳೆಯದಾಗುವಂತ ರೀತಿಯಲ್ಲಿ ನಮ್ಮ ಸರ್ಕಾರ ತೀರ್ಮಾನ ಮಾಡುತ್ತದೆ.
ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂಗಳು ಇರಬೇಕೆಂದ ಕೆ.ಎನ್ ರಾಜಣ್ಣ ಹೇಳಿಕೆಯ ಬಗ್ಗೆ ನಗರದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ, ನಮ್ಮ ಪಕ್ಷದ ವರಿಷ್ಠರು ಹಾಗೂ ನಾಯಕರು ತೀರ್ಮಾನ ಮಾಡ್ತಾರೆ. ರಾಜ್ಯಕ್ಕೆ ಒಳ್ಳೆಯದಾಗುವಂತಹ ರೀತಿಯಲ್ಲೇ ನಮ್ಮ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ತೆಗೆದುಕೊಂಡ ತೀರ್ಮಾನಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿಯಲ್ಲಿ ಎಲ್ಲ ಸೀಟುಗಳನ್ನು ಟೆಂಡರ್ ಕರೆದು ಮಾರಾಟ ಮಾಡ್ತಾರೆ : ಶಿವರಾಜ್ ತಂಗಡಗಿ
ಈಗಾಗಲೇ ಸರ್ಕಾರ್ ಟೇಕಾಫ್ ಆಗಿ ಆಗಿದೆ ಎಂದ ಅವರು, ಹಲವಾರು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೂಡ ನಡೆಸ್ತಾ ಇದೆ. ವಿರೋಧಿಗಳು ಹೇಳಿದ್ರು ಗ್ಯಾರಂಟಿ ಕೋಟ್ರೆ 55 ಸಾವಿರ ಹೋಗುತ್ತೆ, ರಾಜ್ಯದ ಅಭಿವೃದ್ಧಿ ಮಾಡಲು ಆಗಲ್ಲ ಅಂತ ಹೇಳ್ತಾ ಇದ್ರು, ಆದ್ರೆ ಈಗ ಅಭಿವೃದ್ಧಿ ಆಗ್ತಾ ಇಲ್ವಾ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಖಂಡ್ರೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ‘ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ’
ಇನ್ನೂ ಮುಂದುವರೆದು ಮಾತನಾಡಿದ ಅವರು, ಅಭಿವೃದ್ಧಿನೂ ಆಗುತ್ತದೆ, ಬಡವರ ಉದ್ದಾರ ಕೂಡಾ ಆಗುತ್ತದೆ. ಈಗಾಗಲೇ ರಾಜ್ಯದಲ್ಲಿ ಬರ ಘೋಷಣೆಯಾಗಿದೆ. ಎಲ್ಲಿ ಕುಡಿಯಲು ನೀರಿಲ್ಲಾ, ಜಾನುವಾರುಗಳಿಗೆ ಮೇವು ಕೂಡ ಇಲ್ಲಾ ಇದಕ್ಕಾಗಿ ಅಧಿಕಾರಿಗಳು ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡಬೇಕು. ಬರ ಎದುರಿಸಲು ನಮ್ಮ ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದೆ. ಎಲ್ಲಾ ರೀತಿಯ ಸಿದ್ದತೆಗಳನ್ನೂ ಕೂಡ ಮಾಡಿಕೊಳ್ಳಾಲಾಗಿದೆ. ಈಗಾಗಿ ಜನರು ಬರಗಾಲದ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲಾ ಎಂದು ಆಶ್ವಾಸನೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.