Sunday, October 1, 2023
spot_img
- Advertisement -spot_img

‘ಇಂಡಿಯಾ ಹೆಸರು ಬದಲಿಸಿ ಬಿಜೆಪಿಯವರು ತಮ್ಮ ಸೋಲನ್ನು ನೋಡುತ್ತಿದ್ದಾರೆ’

ರಾಮನಗರ: ಈಗ ‘ಇಂಡಿಯಾ’ ಹೆಸರು ಬದಲಾವಣೆ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮ ಹೆಸರನ್ನೂ ಬದಲಾಯಿಸುತ್ತಾರೆ. ಇದು ರಿಪಬ್ಲಿಕ್ ಆಪ್ ‘ಇಂಡಿಯಾ’. ಇಂಡಿಯಾ ಒಕ್ಕೂಟದ ಅಸ್ತಿತ್ವದಿಂದ ಬಿಜೆಪಿಯ ಭಯ ಶುರುವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.

ನಗರದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹೆಸರು ಎಷ್ಟು ಎಫೆಕ್ಟ್ ಆಗಿದೆ ಎಂದರೆ ಅದಕ್ಕಾಗಿ ಹೆಸರು ಬದಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸೋಲನ್ನು ನೋಡುತ್ತಿದ್ದಾರೆ. ಎಲ್ಲದರ ಹೆಸರನ್ನೂ ಬದಲಾವಣೆ ಮಾಡಿ ಅವರ ಮಾತು ಹಾಗೂ ಸಿಗ್ನೇಚರ್ ಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ : ಮಾಜಿ ಸಾಲಿಸಿಟರ್ ಜನರಲ್ ವಿವಾಹದಲ್ಲಿ ಲಲಿತ್ ಮೋದಿ ಹಾಜರ್!

ಇನ್ನೂ ಏನೇನೋ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗ ಆ ವಿಚಾರಗಳನ್ನು ಹೇಳಿದರೆ ಶಾಕ್ ಆಗುತ್ತೀರಾ, ಅಸೆಟ್ ಡೀಮಾನಿಟೈಸ್ (ಆಸ್ತಿ ಅಮಾನೀಕರಣ) ಮಾಡೋಕು ಮುಂದಾಗಿದ್ದಾರಂತೆ. ನಾವು ಭಾರತೀಯರೇ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಬಿಜೆಪಿಯವರು ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಏನಿದು ಇಂಡಿಯಾ ವಿಚಾರ..?

ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾವನ್ನು ‘ಭಾರತ್’ ಎಂದು ಮರುನಾಮಕರಣ ಮಾಡುವ ನಿರ್ಣಯ ಮಂಡಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ 18 ರಿಂದ 22 ರವರೆಗೆ ಐದು ದಿನಗಳ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ಹೊಸ ಸಂಸತ್ ಭವನದಲ್ಲಿ ನಿರ್ಣಯವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಶ್ನೋತ್ತರ ಸಮಯ, ಶೂನ್ಯ ಸಮಯ ಮತ್ತು ಖಾಸಗಿ ಸದಸ್ಯರ ವ್ಯವಹಾರ ಇರುವುದಿಲ್ಲ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳಿಗೆ ಇದನ್ನು ನಿರ್ವಹಿಸಲಾಗುತ್ತದೆ.

ಇದನ್ನೂ ಓದಿ : ದೇಶದ ಹೆಸರು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ: ಶರದ್ ಪವಾರ್

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂದು ಹೆಸರಿಟ್ಟಿರುವುದರಿಂದ ದೇಶದ ಹೆಸರನ್ನು ಭಾರತ್ ಎಂದು ಮರು ನಾಮಕರಣ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ದಾರೆ.

ಅಲ್ಲದೆ, ಈ ಬಗ್ಗೆ ಬಿಜೆಪಿಯ ರಾಜ್ಯಸಭಾ ಸಂಸದ ಹರನಾಥ್ ಸಿಂಗ್ ಯಾದವ್ ಮಾತನಾಡಿ, ದೇಶದ ಹೆಸರನ್ನುಇಂಡಿಯಾದಿಂದ ಭಾರತ ಎಂದು ಬದಲಾಯಿಸಬೇಕು. ‘ಇಂಡಿಯಾ’ ಎಂಬ ಪದವನ್ನು ಬ್ರಿಟಿಷರು ಬಳಸಿದ್ದರು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗಷ್ಟೇ ವಿರೋಧ ಪಕ್ಷ ತನ್ನ ಮೈತ್ರಿಕೂಟಕ್ಕೆ I.N.D.I.A. ಮರುನಾಮಕರಣ ಮಾಡಿಕೊಂಡಿದ್ದಾರೆ. ಇದು ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಎನ್‌ಡಿಎಯನ್ನು ಎದುರಿಸಲು ಯೋಜಿಸಿರುವ ಸುಮಾರು 28 ಪಕ್ಷಗಳನ್ನು ಒಳಗೊಂಡಿದೆ.

ಪ್ರಧಾನಿ ಮೋದಿಯವರ ಈ ನಿರ್ಧಾರವನ್ನು ಇಂಡಿಯಾ ಕೂಟದ ವಿಪಕ್ಷಗಳು ಖಂಡಿಸಿ ದೇಶದ ಹೆಸರು ಬದಲಾಯಿಸಲು ಮುಂದಾಗಿರುವ ಕೇಂದ್ರದ ನಡೆಯನ್ನು ಟೀಕಿಸುವ ಮೂಲಕ ವಿರೋಧ ವ್ಯಕ್ತಪಡಿಸಿವೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles