Friday, September 29, 2023
spot_img
- Advertisement -spot_img

ತಾಲ್ಲೂಕು-ಜಿಲ್ಲಾ ಪಂಚಾಯಿತಿ ಎಲೆಕ್ಷನ್‌ಗೆ ಜೆಡಿಎಸ್ ರೆಡಿ !

ದೊಡ್ಡಬಳ್ಳಾಪುರ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್‌ ಸರ್ವ ಸನ್ನದ್ದವಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಮುಖಂಡರು ತಾ.ಪಂ ಮತ್ತು ಜಿ.ಪಂ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ, ರಾಜ್ಯ ಜೆಡಿಎಸ್ ನಲ್ಲಿ ಪದಾಧಿಕಾರಿಗಳ ಬದಲಾವಣೆಯಾಗಲಿದೆ, ದೇವೇಗೌಡರು, ಕುಮಾರಣ್ಣನವರ ನೇತೃತ್ವದಲ್ಲಿ ನಡೆಯಲಿದೆ, ಜಿ.ಟಿ ದೇವೇಗೌಡರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ: ʼಕಾವೇರಿʼ ಸಮಸ್ಯೆಗೆ ʼಮೇಕೆದಾಟು ಯೋಜನೆʼಯೊಂದೇ ಪರಿಹಾರ: ಡಿಕೆಶಿ

ತಾ.ಪಂ ಮತ್ತು ಜಿ.ಪಂ ಚುನಾವಣೆಗೆ ನಮ್ಮ ಪಕ್ಷ ಸರ್ವ ಸನ್ನದ್ಧವಾಗಿದೆ. ನಮ್ಮ ಕಾರ್ಯಕರ್ತರು ಬಹಳ ಸದೃಢರಾಗಿದ್ದಾರೆ, ಮುಂದಾಳತ್ವದಲ್ಲಿ ಕಾರ್ಯಚಟುವಟಿಕೆಗಳ ರೂಪುರೇಷೆ ನಡೆಯುತ್ತಿದೆ ಎಂದು ವಿವರಿಸಿದರು.

ನಮ್ಮ ತಾಲೂಕಿನ ಕಾರ್ಯಕರ್ತರಲ್ಲಿ ತಮ್ಮದೇ ಶಕ್ತಿಯಿಂದ ಪಕ್ಷ ಕಟ್ಟೋ ವಿವೇಚನೆ ಇದೆ, ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ಒಳ್ಳೆಯ ಮನೋಭಾವವಿದೆ, ಹೈಕಮಾಂಡ್ ಜನ ತಲೆಭಾಗಿ ಕೆಲಸ ಮಾಡುತ್ತೇನೆ, ಕಳೆದ ವಿಧಾನಸಭಾ ಚುನಾವಣೆಯಲ್ಲೂ ನಿಸ್ವಾರ್ಥವಾಗಿ ಕೆಲಸ ಮಾಡಿದ್ದೇವೆ, ಅಭ್ಯರ್ಥಿ ಮುನೇಗೌಡರ ಪರ ಕೆಲಸ ಮಾಡಿದ್ದೆವು, ನನ್ನ ಪಕ್ಷ ಸೇವೆ ಗುರ್ತಿಸಿ ಸಂಪೂರ್ಣ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles