ನವದೆಹಲಿ: ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ಸಜ್ಜಾಗುತ್ತಿದೆ, ದೆಹಲಿಯಲ್ಲಿ ಸೆಪ್ಟೆಂಬರ್ 8 ರಿಂದ 11 ರವರೆಗೆ 200 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಮತ್ತು ಮಾರ್ಗ ಬದಲಿಸಲು ಉತ್ತರ ರೈಲ್ವೆ ನಿರ್ಧರಿಸಿದೆ ಎಂದು ಶನಿವಾರ ಅಧಿಸೂಚನೆ ತಿಳಿಸಿದೆ.
ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 9 ರಂದು 90 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ಸೆಪ್ಟೆಂಬರ್ 10 ರಂದು 100 ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ರೈಲುಗಳು ದೆಹಲಿಯಿಂದ ದಕ್ಷಿಣ ಹರಿಯಾಣದ ಸೋನಿಪತ್-ಪಾಣಿಪತ್, ರೋಹ್ಟಕ್, ರೇವಾರಿ ಮತ್ತು ಪಲ್ವಾಲ್ ಮಾರ್ಗಗಳಿಗೆ ಚಲಿಸುತ್ತಿರುವವು ಆಗಿವೆ.
ಇದನ್ನೂ ಓದಿ: ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾದ ಸೋನಿಯಾ ಗಾಂಧಿ!
ಇದಲ್ಲದೆ, ದೆಹಲಿ-ರೇವಾರಿ ಎಕ್ಸ್‌ಪ್ರೆಸ್ ವಿಶೇಷ ಮತ್ತು ರೇವಾರಿ-ದೆಹಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಸೆಪ್ಟೆಂಬರ್ 11 ರಂದು ರದ್ದುಗೊಳಿಸಲಾಗುವುದು.
ಇದಲ್ಲದೆ, ಆ ಅವಧಿಯಲ್ಲಿ ನವದೆಹಲಿ ರೈಲು ನಿಲ್ದಾಣದಿಂದ ಹೊರಡುವ ಅಥವಾ ಕೊನೆಯ ಸ್ಟಾಪ್ ಮಾಡಲು ಸೂಚಿಸಲಾದ ಹಲವಾರು ರೈಲುಗಳು ಈಗ ಗಜಿಯಾಬಾದ್ ಅಥವಾ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಿಂದ ಹೊರಟಿವೆ ಅಥವಾ ಲಾಸ್ಟ ಸ್ಟಾಪ್ ಮಾಡಿಕೊಳ್ಳುತ್ತಿವೆ.
ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸಲಿದೆ.
ನವದೆಹಲಿ ಜಿ20 ಶೃಂಗಸಭೆಯು ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಆಹ್ವಾನಿತ ಅತಿಥಿ ದೇಶಗಳ ನಾಯಕರು ತಂಗಲು ಸೇರಿದಂತೆ ಬೃಹತ್ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಗ್ರೂಪ್ ಆಫ್ ಟ್ವೆಂಟಿ (G20) 19 ದೇಶಗಳನ್ನು ಒಳಗೊಂಡಿದೆ – ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಎಸ್, ಯುಕೆ ಮತ್ತು ಯುರೋಪಿಯನ್ ಯೂನಿಯನ್.
ಇದನ್ನೂ ಓದಿ: ಜಿ20 ಶೃಂಗಸಭೆ: ದೆಹಲಿಯಲ್ಲಿ 130000 ಸಿಬ್ಬಂದಿ, ಬುಲೆಟ್ ಪ್ರೂಫ್ ಕಾರು, ಡ್ರೋನ್; ಹೇಗಿದೆ ನೋಡಿ ಬಿಗಿಭದ್ರತೆ!
ಭಾರತವು ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್ ಮತ್ತು ಯುಎಇಯನ್ನು ಮೆಗಾ ಈವೆಂಟ್‌ಗೆ ಅತಿಥಿ ರಾಷ್ಟ್ರಗಳಾಗಿ ಆಹ್ವಾನಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.