ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ನಾಳೆ 22 ರಂದು ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಸಾಹಿತಿ ಎಸ್ಎಲ್ ಭೈರಪ್ಪ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಒಟ್ಟು 106 ಮಂದಿಗೆ ವಿವಿಧ ವಿಭಾಗ ಹಾಗೂ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿ ಕೊಡುಗೆ ನೀಡಿದ ಮಹನೀಯರನ್ನು ಗೌರವಿಸಲಾಗುತ್ತದೆ,
ಪ್ರಶಸ್ತಿ ಸ್ವೀಕರಿಸಲಿರುವವರ ಪೈಕಿ ಕರ್ನಾಟಕದಿಂದ ಸಾಹಿತಿ ಎಸ್ಎಲ್ ಭೈರಪ್ಪ ಮತ್ತು ಮಾಜಿ ಸಿಎಂ ಎಸ್ಎಂ ಕೃಷ್ಣ ಸೇರಿದ್ದಾರೆ. ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತದೆ. ಕರ್ನಾಟಕದ ತಮಟೆ ವಾದಕ ಚಿಕ್ಕಬಳ್ಳಾಪುರದ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಕೊಡಗಿನ ಉಮ್ಮತ್ತಾಟ್ ಜಾನಪದ ನೃತ್ಯ ಕೊಡವ ಸಂಸ್ಕೃತಿಯ ರಾಣಿ ಮಾಚಯ್ಯ, ಡಾ ಖಾದರ್ ವಲ್ಲಿ (ವಿಜ್ಞಾನ) ಎಸ್ ಸುಬ್ಬರಾಮನ್ (ಪುರಾತತ್ತ್ವ ಶಾಸ್ತ್ರ), ಶಾ ರಶೀದ್ ಅಹ್ಮದ್ ಖಾದ್ರಿ(ಕಲೆ) ಅವರಿಗೆ ಈ ಬಾರಿ ಪದ್ಮಶ್ರೀ ಲಭಿಸಲಿದೆ.
ಎಸ್ ಎಂ ಕೃಷ್ಣ ಅವರಿಗೆ ಸಾರ್ವಜನಿಕ ಸೇವೆ ಕ್ಷೇತ್ರದಲ್ಲಿ ಕೊಡುಗೆ ಪರಿಗಣಿಸಿ ಪದ್ಮವಿಭೂಷಣ ನೀಡಲಾಗಿದೆ. ಸುಧಾಮೂರ್ತಿ ಅವರಿಗೆ ಸಾಮಾಜಿಕ ಸೇವೆ ಹಾಗೂ ಭೈರಪ್ಪ ಅವರಿಗೆ ಸಾಹಿತ್ಯ ಕ್ಷೇತ್ರದ ಕೊಡುಗೆ ಪರಿಗಣಿಸಿ ಪದ್ಮಭೂಷಣ ಒಲಿದು ಬಂದಿದೆ.