Sunday, September 24, 2023
spot_img
- Advertisement -spot_img

‘ಕುಮಾರಸ್ವಾಮಿ ದಾಖಲೆ ಇಲ್ಲದೆ ಮಾತಾಡಲ್ಲ; ಲಘುವಾಗಿ ಮಾತಾಡೋದು ಬೇಡ’

ಬೆಂಗಳೂರು: ಕುಮಾರಸ್ವಾಮಿ ಅವರ ಪೆನ್ ಡ್ರೈವ್ ಬಗ್ಗೆ ನಡೆಯುವ ವಾದ ವಿವಾದ ನೋಡಿದ್ದೇನೆ. ಅವರು ದಾಖಲೆ ಇಲ್ಲದೆ ಅಷ್ಟು ಸುಲಭವಾಗಿ ಮಾತಾಡಲ್ಲ; ಅವರನ್ನ (ಕುಮಾರಸ್ವಾಮಿ) ಅಷ್ಟು ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಆಗಲ್ಲ; ಲಘುವಾಗಿ ಮಾತಾಡೋದು ಬೇಡ’ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿದರು.

ಜಾತ್ಯತೀತ ಜನತಾದಳ (ಜೆಡಿಎಸ್) ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‌ಡಿಡಿ, ‘ನಮ್ಮ ಪಕ್ಷದ ಒಬ್ಬ ಕಾರ್ಯಕರ್ತ ಕೂಡ ಪಕ್ಷ ಬಿಡೋದಿಲ್ಲ. ಹಾಗೇನಾದ್ರೂ ಅವರಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳ್ತೀನಿ. ಸೆ.10 ರಂದು ಸಭೆಯಲ್ಲಿ ಎಲ್ಲರೂ ಭಾಗಿಯಾಗ್ತಾರೆ. ಕುಮಾರಸ್ವಾಮಿ ಅವರೇ ಅಂದು ಮುಖ್ಯ ಭಾಷಣಕಾರಾಗಿರ್ತಾರೆ’ ಎಂದು ಹೇಳಿದರು.

ಇದನ್ನೂ ಓದಿ; ‘ಪ್ರಾದೇಶಿಕ ಪಕ್ಷ ಉಳಿಸೋದು ನಮ್ಮ ಗುರಿ; ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ’

‘ಮಂಡ್ಯ ಜಿಲ್ಲೆ ರಾಜಕಾರಣದ ಪ್ರತಿಯೊಂದು ವಿಚಾರದ ಕುರಿತು ಚರ್ಚಿಸಿದ್ದೇನೆ. ಯಾರಾದ್ರೂ ಒಬ್ಬರು ಪಕ್ಷ ಬಿಡ್ತಾನೆ ಅಂತ ಊಹೆ ಇದ್ದರೆ ಹೇಳಿ. ಸೆ.10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ; 20 ಸಾವಿರ ಜನ ಸೇರಿಸುವ ಗುರಿ ಇದೆ. ಯಾರಿಗೂ ಹಣ ಕೊಟ್ಟು ಕರೆಸೋದಿಲ್ಲ, ಅಭಿಮಾನದಿಂದ ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಬರುತ್ತಾರೆ. ಎಲ್ಲ ಜಿಲ್ಲೆಯ ಕಾರ್ಯಕರ್ತರು ಬರ್ತಾರೆ. ಅಂದು ಹೇಳಿ ಪ್ರಾದೇಶಿಕ ಪಕ್ಷ ಉಳಿಯುತ್ತಾ, ಬೆಳೆಯುತ್ತಾ ಅಂಥ’ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆ ಮಾಡಿದ್ದು ಯಾರು?

ಕನಕಪುರದಿಂದ ರಾಮನಗರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ಆದ ಬಗ್ಗೆ ಮಾತನಾಡಿ, ‘ಕುಮಾರಸ್ವಾಮಿ ದೇವೇಗೌಡರ ಮಗ ಅಂತ ಮಾತಾಡಲ್ಲ. ಕನಕಪುರನೂ ಒಂದೇ, ಚನ್ನಪಟ್ಟಣವೂ ಒಂದೇ, ರಾಮನಗರವೂ ಒಂದೇ. ರಾಮನಗರವನ್ನು ಜಿಲ್ಲೆ ಮಾಡಿದ್ದು ಯಾರು? ಎದೆತಟ್ಟಿಕೊಂಡು ಹೇಳಿ ನೋಡೋಣ. ಎಸ್ ಎಮ್ ಕೃಷ್ಣ ಸಿಎಂ ಆದಾಗ ನನ್ನ ಸೋಲಿಸಬೇಕು ಅಂತ ಹೋರಾಡಿದ್ರು. ಅವರು ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡುವುದಕ್ಕೆ ಹೋಗಲಿಲ್ಲ. ಕುಮಾರಸ್ವಾಮಿ ಸಿಎಂ ಆದ ಮೇಲೆ ಜಿಲ್ಲೆ ಮಾಡಬೇಕಾಯ್ತು’ ಎಂದು ಡಿಕೆ ಸಹೋದರರಿಗೆ ಪರೋಕ್ಷ ತಿರುಗೇಟು ಕೊಟ್ಟರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles