Friday, September 29, 2023
spot_img
- Advertisement -spot_img

ಜೈಲು ಶಿಕ್ಷೆ ರದ್ದಾದರೂ ಇಮ್ರಾನ್ ಖಾನ್ ಗೆ ಸಿಗದ ಬಿಡುಗಡೆ ಭಾಗ್ಯ!

ಇಸ್ಲಾಮಾಬಾದ್ : ತೋಷಾಖಾನಾ (ಸರ್ಕಾರಿ ಉಡುಗೊರೆ) ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆರದ್ದಾದರೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಜೈಲಿನಿಂದ ಬಿಡುಗಡೆ ಭಾಗ್ಯ ದೊರೆತಿಲ್ಲ.

ತೋಷಾಖಾನಾ ಪ್ರಕರಣದಲ್ಲಿ ಕೆಳ ನ್ಯಾಯಾಲಯ ಇಮ್ರಾನ್ ಖಾನ್ ಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ಇಮ್ರಾನ್ ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್, ಇಮ್ರಾನ್ ಖಾನ್ ಗೆ ಕೆಳ ನ್ಯಾಯಾಲಯ ವಿಧಿಸಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ. ಇದರಿಂದ ಖಾನ್ ಗೆ ದೊಡ್ಡ ರಿಲೀಫ್ ಸಿಕ್ಕಿದೆ. ಆದರೆ, ರಹಸ್ಯ ದಾಖಲೆ ಸೋರಿಕೆ ಪ್ರಕರಣವೂ ಇಮ್ರಾನ್ ಖಾನ್ ಮೇಲೆ ಇರುವ ಹಿನ್ನೆಲೆ ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ.

ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದ ವಿವಿಧ ನ್ಯಾಯಾಲಯಗಳಲ್ಲಿ ನೂರಾರು ಪ್ರಕಣಗಳಿವೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಅಂತಿಮ ವಿಚಾರಣೆಯ ಹಂತದಲ್ಲಿವೆ. ಕೆಲ ದಿನಗಳ ಹಿಂದೆಯಷ್ಟೇ ಹಿಂಸಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಇಮ್ರಾನ್ ಖಾನ್ ಸಲ್ಲಿಸಿದ್ದ 9 ಅರ್ಜಿಗಳನ್ನು ಇಸ್ಲಾಮಾಬಾದ್ ನ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು.

ಇದನ್ನೂ ಓದಿ : ಮತ್ತೆ ಗಡಿ ಕ್ಯಾತೆ ತೆಗೆದ ಚೀನಾ : ಭಾರತದ ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ

ಇಮ್ರಾನ್ ಮೇಲಿರುವ ಪ್ರಕರಣಗಳ ಪೈಕಿ ತೋಷಾಖಾನಾ ಮತ್ತು ದಾಖಲೆ ಸೋರಿಕೆ ಅತ್ಯಂತ ದೊಡ್ಡ ಪ್ರಕರಣಗಳು. ಈ ಪೈಕಿ ತೋಷಾಖಾನದಲ್ಲಿ ಜೈಲು ಶಿಕ್ಷೆ ರದ್ದಾಗಿದೆ. ದಾಖಲೆ ಸೋರಿಕೆ ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿದೆ. ಇದು ಇಮ್ರಾನ್ ಮೇಲಿರುವ ಅತ್ಯಂತ ಗಂಭೀರ ಪ್ರಕರಣವಾಗಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles