ಇಸ್ಲಾಮಾಬಾದ್ : ದ್ವಿಪಕ್ಷೀಯ ಬಾಂಧವ್ಯದಲ್ಲಿ ಕಲಹದ ಹೊರತಾಗಿಯೂ ಪಾಕಿಸ್ತಾನದ ಮಾಧ್ಯಮಗಳು ಭಾರತದ ಐತಿಹಾಸಿಕ ಚಂದ್ರಯಾನ-3ರ ಸುದ್ದಿಯನ್ನು ಬಹಳ ಮಹತ್ವದಿಂದ ಪ್ರಸಾರ ಮಾಡಿವೆ. ಪಾಕಿಸ್ತಾನದ ಮಾಜಿ ಸಚಿವರೊಬ್ಬರು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋವನ್ನು ಕೊಂಡಾಡಿದ್ದಾರೆ.
‘ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆ ಇಳಿಸಿದ ಜಗತ್ತಿನ ಮೊದಲ ರಾಷ್ಟ್ರ’ ಎಂಬ ಶೀರ್ಷಿಕೆಯಡಿ ಪಾಕಿಸ್ತಾನದ ಹೆಚ್ಚಿನ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಲ್ಲಿ ಸುದ್ದಿ ಪ್ರಕಟಗೊಂಡಿವೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪ್ರಾರಂಭಗೊಂಡ ಭಾರತದ ಚಂದ್ರಯಾನ-3ರ 40 ದಿನಗಳ ಪ್ರಯಾಣವು ಅಂತಿಮವಾಗಿ ಚಂದ್ರನ ಮೇಲೆ ಇಳಿದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಕೊನೆಗೊಂಡಿದೆ ಎಂದು ಪಾಕಿಸ್ತಾನ ಸರ್ಕಾರ ಪ್ರಾಯೋಜಿತ ಜಿಯೋ ನ್ಯೂಸ್ ತನ್ನ ವೆಬ್ ಡೆಸ್ಕ್ ಮೂಲಕ ಲ್ಯಾಂಡಿಂಗ್ ಕುರಿತು ಸುದ್ದಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ : ನಾಳೆ ನಡೆಯಬೇಕಿದ್ದ ಪ್ರಧಾನಿ ಮೋದಿ ರೋಡ್ ಶೋ ರದ್ದು!
ನ್ಯೂಸ್ ಇಂಟರ್‌ನ್ಯಾಶನಲ್, ಧವನ್ ಪತ್ರಿಕೆ, ಬ್ಯುಸಿನೆಸ್ ರೆಕಾರ್ಡರ್, ದುನ್ಯಾ ನ್ಯೂಸ್ ಸೇರಿದಂತೆ ಪಾಕಿಸ್ತಾನ ಮೂಲದ ವಿವಿಧ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಕೂಡ ಚಂದ್ರಯಾನ ಕುರಿತ ಸುದ್ದಿಯನ್ನು ಮೊದಲ ಪುಟದಲ್ಲಿ ಪ್ರಕಟಿಸಿವೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆಯ ಫೆಡರಲ್ ಸಚಿವರಾಗಿದ್ದ ಫವಾದ್ ಚೌಧರಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಇದು ಮಹತ್ವದ ಕ್ಷಣ ಎಂದು ಹೇಳಿದ್ದಾರೆ.
ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗುವ ಮುನ್ನ ಟ್ವೀಟ್ ಮಾಡಿದ್ದ ಫವಾದ್ ಚೌಧರಿ, ‘ಎಲ್ಲರ ದೃಷ್ಟಿ ಚಂದ್ರಯಾನ-3ರ ಮೇಲಿದೆ. ಭಾರತದ ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಮಹತ್ವದ ದಿನ. ಈ ಮಹಾನ್ ಸಾಧನೆಗಾಗಿ ಭಾರತದ ಜನರಿಗೆ ನಾನು ಅಭಿನಂದನೆಗಳನ್ನು ಹೇಳುತ್ತೇನೆ ಎಂದು ಹೇಳಿದ್ದರು. ಚಂದ್ರಯಾನ-3ರ ಲೈವ್ ಸ್ಟ್ರೀಮ್ ಮಾಡುವಂತೆ ಪಾಕಿಸ್ತಾನದ ಮಾಧ್ಯಮಗಳಿಗೆ ವಿನಂತಿಸಿದ್ದರು.
ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ 2019 ರ ಫೆಬ್ರವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಭಾರತದ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳು ತೀವ್ರ ಹದೆಗೆಟ್ಟಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.