Wednesday, November 29, 2023
spot_img
- Advertisement -spot_img

ಇಮ್ರಾನ್ ಖಾನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ ಪಾಕ್ ನ್ಯಾಯಾಲಯ

ಇಸ್ಲಾಮಾಬಾದ್‌ : ಅಲ್-ಖಾದಿರ್ ಟ್ರಸ್ಟ್ ಮತ್ತು ತೋಷಖಾನಾ ಉಡುಗೊರೆ ಪ್ರಕರಣಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಸೋಮವಾರ ಬಂಧನ ವಾರೆಂಟ್ ಹೊರಡಿಸಿದೆ.

ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ದ ಕೋರಿಕೆ ಮೇರೆಗೆ ಇಸ್ಲಾಮಾಬಾದ್‌ನ ಎನ್‌ಎಬಿ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಬಶೀರ್ ಇಮ್ರಾನ್ ಖಾನ್ ವಿರುದ್ದ ಬಂಧನ ವಾರೆಂಟ್ ಹೊರಡಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ : 8 ಮಂದಿ ಭಾರತೀಯರಿಗೆ ಮರಣದಂಡನೆ: ಮೇಲ್ಮನವಿ ತಿರಸ್ಕರಿಸಿದ ಕತಾರ್ ಕೋರ್ಟ್!

ಅಲ್‌-ಖಾದಿರ್‌ ಟ್ರಸ್ಟ್‌ ಹೆಸರಿನಲ್ಲಿ ರಾಷ್ಟ್ರದ ಖಜಾನೆಯ ಸುಮಾರು 5,000 ಕೋಟಿ ರೂಪಾಯಿ ಲೂಟಿ ಮಾಡಿದ ಆರೋಪ ಇಮ್ರಾನ್ ಖಾನ್ ಮೇಲಿದೆ. ಇದೇ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಮೊದಲ ಬಾರಿಗೆ 2023ರ ಮೇ 9 ರಂದು ಪೊಲೀಸರು ಬಂಧಿಸಿದ್ದರು.

ಈ ವೇಳೆ ಆಕ್ರೋಶಗೊಂಡ ಖಾನ್ ಬೆಂಬಗಲಿರು ಹಿಂಸಾಚಾರ ನಡೆಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮೇ 11 ರಂದು ಇಮ್ರಾನ್ ಖಾನ್ ಅವರನ್ನು ಬಿಡುಗಡೆ ಮಾಡಲಾಯಿತು. ಆದರೆ, ತೋಷಖಾನಾ ಪ್ರಕರಣದಲ್ಲಿ ಖಾನ್ ಮತ್ತೊಮ್ಮೆ ಬಂಧಿತರಾದರು. ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಇಮ್ರಾನ್ ಖಾನ್‌ಗೆ ಎರಡು ವಾರಗಳ ಜಾಮೀನು ನೀಡಿತ್ತು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles