ಬೆಳಗಾವಿ : ‘ಪಂಚಮಸಾಲಿ ಸಮುದಾಯಕ್ಕೆ 2(ಎ) ಮೀಸಲಾತಿ ಕೊಡಬೇಕೆಂದು ಒತ್ತಾಯ ಮಾಡ್ತಿವಿ; ಸಮಾಜಕ್ಕೆ ಈ ಸರ್ಕಾರ ಮೀಸಲಾತಿ ಕೊಡಬೇಕೆಂದು ಒತ್ತಾಯ ಮಾಡ್ತೀವಿ. ಸ್ಪಂದನೆ ಸಿಗದಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ : ಕರಾವಳಿಯಲ್ಲಿ ಬಿಜೆಪಿಗೆ ಬಿಗ್ ಶಾಕ್! ‘ಕೈ’ ಹಿಡಿದ ಸುಕುಮಾರ್ ಶೆಟ್ಟಿ
ಪಂಚಮಸಾಲಿ ಮೀಸಲಾತಿ ಹೋರಾಟ ಸುಮಾರು ವರ್ಷಗಳಿಂದ ಸರ್ಕಾರದ ಮುಂದಿದೆ. ಪಂಚಮಸಾಲಿಗಳನ್ನು 2ಎ ಪ್ರವರ್ಗಕ್ಕೆ ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಪಂಚಮಸಾಲಿ ಸಮಾಜ ರಾಜ್ಯದಲ್ಲಿ ಹೋರಾಟ ನಡೆಸುವ ಬಗ್ಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : G20 Summit 2023 : ಜಿ20 ಶೃಂಗಸಭೆಯ ಔತಣಕೂಟದಲ್ಲಿ ಭಾಗಿಯಾಗುತ್ತಿಲ್ಲ ಹೆಚ್ಡಿಡಿ!
ನಗರದಲ್ಲಿ ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಪಂಚಮಸಾಲಿ ಸಮಾಜಕ್ಕೆ ‘2ಎ’ ಮೀಸಲಾತಿ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಮತ್ತೊಮ್ಮೆ ಒತ್ತಾಯ ಮಾಡ್ತಿವಿ. ಈ ಹಿಂದೆಯೂ ಬಿಜೆಪಿ ಸರ್ಕಾರಕ್ಕೆ ಮೃದುವಾಗಿ ಮನವಿ ಮಾಡಿದ್ವಿ; ಆ ಬಳಿಕ ಉಗ್ರ ಹೋರಾಟ ನಡೆಸಿದ್ದೆವು. ಈಗಲೂ ಈ ಸರ್ಕಾರಕ್ಕೆ ನಾವು ಮೃದುವಾಗಿ ಒತ್ತಾಯ ಮಾಡ್ತಿದ್ದೇವೆ. ರಾಜ್ಯ ಸರ್ಕಾರ 2ಎ ಮೀಸಲಾತಿಗೆ ಇರೋ ಕಾನೂನು ತೊಡಕು ನಿವಾರಿಸಬೇಕು’ ಎಂದು ಒತ್ತಾಯಿಸಿದರು.
ನಮ್ಮ ಸಮಾಜಕ್ಕೆ ‘ಒಬಿಸಿ’ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರವನ್ನೂ ಒತ್ತಾಯಿಸುತ್ತಿದ್ದೇವೆ. ‘ಒಬಿಸಿ’ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ರಾಜ್ಯ ಸರ್ಕಾರ ‘2ಎ’ ಮೀಸಲಾತಿ ಗೆ ಇರೋ ಕಾನೂನು ತೊಡಕು ನಿವಾರಿಸಬೇಕಾಗಿದೆ, ಸರ್ಕಾರ ಈಗ ನಮ್ಮ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನ ಕೊಟ್ಟಿದೆ. ಆದ್ರೆ, ಇಬ್ಬರಿಗೆ ಸಚಿವ ಸ್ಥಾನ ಕೊಟ್ಟಿರುವುದು ತೃಪ್ತಿ ತಂದಿಲ್ಲ. ಈ ನಿಟ್ಟಿನಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಸೆಪ್ಟೆಂಬರ್ 10 ರಂದು ಹೋರಾಟ ನಡೆಯಲಿದ್ದು, ರಾಜ್ಯದ 21 ಜಿಲ್ಲಾ ಕೇಂದ್ರಗಳಲ್ಲಿಯೂ ಹೋರಾಟ ಮಾಡಲಿದ್ದೇವೆ ಎಂದು ಸೂಚನೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.