ನವದೆಹಲಿ : ಟೀಂ ಇಂಡಿಯಾದ ಪೂರ್ಣ ಪ್ರಮಾಣದ ಟಿ 20 ನಾಯಕನಾಗಿ ಆಯ್ಕೆಯಾಗಿರುವ ಹಾರ್ದಿಕ್ ಪಾಂಡ್ಯ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಭೇಟಿ ಮಾಡಿದರು.”ಗೌರವಾನ್ವಿತ ಗೃಹ ಸಚಿವ ಅಮಿತ್ ಶಾ ಜೀ ಅವರೊಂದಿಗೆ ಅಮೂಲ್ಯ ಸಮಯ ಕಳೆಯಲು ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ಒಂದು ಗೌರವ ಮತ್ತು ಅವಕಾಶ” ಎಂದು ಹಾರ್ದಿಕ್ ಮತ್ತು ಅವರ ಸಹೋದರ ಅಮಿತ್ ಶಾ ಅವರೊಂದಿಗೆ ಮಾತನಾಡುತ್ತಿರುವ ಫೋಟೋ ಟ್ವೀಟ್ ಮಾಡಿದ್ದಾರೆ.
ಜನವರಿ 3 ರಿಂದ ಪ್ರಾರಂಭವಾಗುವ ಮೂರು ಪಂದ್ಯಗಳ T20I ಶ್ರೀಲಂಕಾ ಸರಣಿಗೆ ನಾಯಕನಾಗಿ ನೇಮಕಗೊಂಡಿರುವ 27 ವರ್ಷದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಇಂದು ತಮ್ಮ ಕ್ರಿಕೆಟಿಗ ಸಹೋದರ ಕೃನಾಲ್ ಜೊತೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.‘ನಮ್ಮನ್ನು ಕರೆಸಿ ಮಾತುಕತೆ ನಡೆಸಿದ ಗೃಹಸಚಿವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಗೌರವ, ಸಂತೋಷ ನೀಡಿದೆ’ ಎಂದು ಹಾರ್ದಿಕ್ ಪಾಂಡ್ಯ ಕ್ಯಾಪ್ಶನ್ ನಿಡಿದ್ದಾರೆ.
ಹಾರ್ದಿಕ್ ಪಾಂಡ್ಯ ತಮ್ಮ ಸಹೋದರ ಕೃನಾಲ್ ಪಾಂಡ್ಯ ಜೊತೆಗೆ ಅಮಿತ್ ಶಾರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಭೇಟಿಯ ಉದ್ದೇಶವೇನು ಅನ್ನೋದನ್ನು ಅವರು ಬಹಿರಂಗಪಡಿಸಿಲ್ಲ.ಪಾಂಡ್ಯ ಬ್ರದರ್ಸ್ ಜೊತೆಗೆ ಆತ್ಮೀಯವಾಗಿ ಮಾತನಾಡಿರುವ ಅಮತ್ ಶಾ ಕುಶಲೋಪರಿ ವಿಚಾರಿಸಿದ್ದಾರೆ. ಈ ಫೋಟೋಗನ್ನು ಕೆಲವು ದಿನಗಳ ಹಿಂದೆಯೇ ತೆಗೆದಿದ್ದು, ಈಗ ಪೋಸ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.