ಮಂಡ್ಯ : ತಮಿಳುನಾಡಿಗೆ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಅನ್ನದಾತರು ಕತ್ತೆಗಳ ಮೆರವಣಿಗೆ ಮಾಡುವ ಮೂಲಕ ಸರ್ಕಾರದ ವಿರಿದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಗರದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಅವರು, ಅರೆಬೆತ್ತಲೆಯಾಗಿ, ಕತ್ತೆಗಳನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕತ್ತೆಗಳ ರೀತಿ ವರ್ತನೆ ಮಾಡುತ್ತಿವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸರ್ಕಾರಗಳಿಗಿಂತ ಕತ್ತೆಗಳೇ ಲೇಸು ಎಂದು ದಿಕ್ಕಾರ ಕೂಗಿದ್ದಾರೆ.


ಇದನ್ನೂ ಓದಿ : ಬಿಜೆಪಿ-ಜೆಡಿಎಸ್ ಮೈತ್ರಿ : ದೆಹಲಿಗೆ ತೆರಳಲಿರುವ ಹೆಚ್ ಡಿ ಕುಮಾರಸ್ವಾಮಿ
ಈ ಸಂದರ್ಭದಲ್ಲಿ ವಾಹನ ನಿಲ್ಲಿಸಿ ಪ್ರತಿಭಟನೆ ಮಾಡುವಂತೆ ಸಾರ್ವಜನಿಕರಲ್ಲಿ ರೈತರು ಮನವಿ ಮಾಡಿಕೊಂಡರು. ಆದರೆ, ಯಾರು ಕೂಡ ಸ್ಪಂದಿಸದ ಕಾರಣ ಸಿಟ್ಟಿಗೆದ್ದ ರೈತರು, ಕಾವೇರಿ ನಿಮಗೆ ಬೇಕಾಗಿಲ್ವ, ನೀವು ನೀರು ಕುಡಿಯಲ್ವಾ, ರೈತರ ಗೋಳು ಇಲ್ಲಿ ಯಾರು ಕೇಳೋರಿಲ್ಲ. ನಮ್ಮೆಲ್ಲರ ಬದುಕೆ ಕಾವೇರಿ, ಕಾವೇರಿ ನೀರು ನಮ್ಮ ಕೈ ಬಿಟ್ಟು ಹೋದರೆ ನಾವೇನು ಮಾಡಲು ಸಾಧ್ಯವಿಲ್ಲ. ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದರು.
ಇದನ್ನೂ ಓದಿ : ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ, ನಾವು ಕುಡಿಯಲು ಕೇಳ್ತಿದ್ದೇವೆ : ದರ್ಶನ್ ಪುಟ್ಟಣ್ಣಯ್ಯ
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.