Thursday, September 28, 2023
spot_img
- Advertisement -spot_img

ನಿನ್ನ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ; ಪರಮೇಶ್ವರ್ ವಿರುದ್ಧ ಏಕವಚನದಲ್ಲೇ ಈಶ್ವರಪ್ಪ ವಾಗ್ದಾಳಿ!

ಬಾಗಲಕೋಟೆ: ನಿಮ್ಮ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ; ಹಿಂದು ಧರ್ಮ ಹುಟ್ಟಿದ್ಯಾವಾಗ ಅಂತ ಕೇಳುವಷ್ಟು ದೊಡ್ಡವನಾದೆಯಾ ಎಂದು ಗೃಹ ಸಚಿವ ಜಿ.ಪರಮೇಶ್ವರ್ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

‘ಹಿಂದೂ ಧರ್ಮ ಹುಟ್ಟಿದ್ದು ಯಾವಾಗ, ಯಾರು ಹುಟ್ಟಿಸಿದರು ಎಂಬುದೇ ಪ್ರಶ್ನೆ’ ಎಂಬ ಜಿ.ಪರಮೇಶ್ವರ್ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಹಿಂದು ಧರ್ಮಕ್ಕೆ ಸನಾತನ ಧರ್ಮ ಎನ್ನುತ್ತೇವೆ; ಜಿ. ಪರಮೇಶ್ವರ ಅವರ ಬಗ್ಗೆ ತುಂಬಾ ಗೌರವವಿದೆ. ಆದರೆ, ಅವ್ರ ಬಾಯಲ್ಲಿ ಇಂತಹದು ಏಕೆ ಬಂತೋ ಗೊತ್ತಿಲ್ಲ. ಪರಮೇಶ್ವರ್ (G Parameshwar) ಅಪ್ಪನ ಹೆಸರು ಗಂಗಾಧರಪ್ಪ, ತಾತನ ಹೆಸರು ಮರಿಯಪ್ಪ. ಅವರ ಮುತ್ತಜ್ಜನ ಹೆಸರು ಹೇಳಲಿ ನೋಡೊಣ’ ಎಂದು ಕಿಡಿಕಾರಿದರು.

ಇದನ್ನೂ ಓದಿ; ‘ಸನಾತನ’ ವಿವಾದ : ಪ್ರಿಯಾಂಕ್ ಖರ್ಗೆ, ಉದಯನಿಧಿ ವಿರುದ್ಧ ಎಫ್ಐಆರ್

‘ನಿಮ್ಮ ವಂಶದ ಮುತ್ತಜ್ಜನ ಹೆಸರೇ ನಿನಗೆ ಗೊತ್ತಿಲ್ಲ, ನೂರಾರು ವರ್ಷಗಳ ಇತಿಹಾಸ ಇರುವ ಹಿಂದು ಧರ್ಮದ ಬಗ್ಗೆ ಪ್ರಶ್ನೆ ಕೇಳುವಂತಹ ಅವಕಾಶವೇ ಪರಮೇಶ್ವರ ಅವರಿಗೆ ಬರಬಾರದು. ಪರಮೇಶ್ವರ್ ಹಿರಿಯರು, ಗೃಹ ಸಚಿವ. ಯಾರೇ ಏನೇ ಮಾತನಾಡಿದ್ರು ಹಿಂದು ಸಮಾಜ ಶಾಂತವಾಗಿದೆ. ನಿಮ್ಮ ಅಪ್ಪನ ಹೆಸರು ಗಂಗಾಧರಪ್ಪ, ಅಜ್ಜನ ಹೆಸರು ಮರಿಯಪ್ಪ, ಮುತ್ತಜ್ಜ, ಅದರ ಮುತ್ತಜ್ಜ ಗೊತ್ತಾ ನಿಮಗೆ’ ಎಂದು ಪ್ರಶ್ನಿಸಿದರು.

‘ನಿನ್ನ ಕುಟುಂಬದ ಬಗ್ಗೆಯೇ ನಿನಗೆ ಗೊತ್ತಿಲ್ಲ, ಹಿಂದು ಧರ್ಮ ಯಾವತ್ತು ಹುಟ್ಟಿತ್ತು ಅಂತ ಕೇಳುವಷ್ಟು ದೊಡ್ಡ ಮನುಷ್ಯ ಆದ್ಯಾ ನೀನು? ಕೆಲವರಿಗೆ ಮಾಧ್ಯಮಗಳಲ್ಲಿ ತಮ್ಮ ಹೆಸರು ಬರಬೇಕು ಅನ್ನೋ ಕಾಯಿಲೆ ಬಂದಿದೆ. ಪರಮೇಶ್ವರ ಅವರಲ್ಲಿ ನಾನು ಪ್ರಾರ್ಥನೆ ಮಾಡ್ತೇನೆ, ಹಿಂದು ಧರ್ಮದ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಇಲ್ಲ. ಹಾಗಾಗಿ, ದಯವಿಟ್ಟು ಕ್ಷಮೆ ಕೇಳಿಬಿಡಿ ಇಲ್ಲಾಂದ್ರೆ ನಿಮ್ಮ ಮುತ್ತಜ್ಜರ ಪಟ್ಟಿ ತೆರೆಯಿರಿ’ ಎಂದು ಸವಾಲು ಹಾಕಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles