Thursday, September 28, 2023
spot_img
- Advertisement -spot_img

‘ವಿಶೇಷ ಅಧಿವೇಶನ ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ’

ನವದೆಹಲಿ : ಸಂಸತ್ ನ ವಿಶೇಷ ಅಧಿವೇಶನ ‘ಐತಿಹಾಸಿಕ ನಿರ್ಧಾರಗಳಿಗೆ’ ಸಾಕ್ಷಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕಲಾಪಕ್ಕೆ ತೆರಳುವ ಮುನ್ನ ಸಂಸತ್ ನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಎಲ್ಲಾ ನಿರ್ಧಾರಗಳನ್ನು ಹೊಸ ಸಂಸತ್ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುವುದು. ವಿಶೇಷ ಅಧಿವೇಶನದ ಅವಧಿ ಕಡಿಮೆ ಇರಬಹುದು. ಆದರೆ, ತೆಗದುಕೊಳ್ಳುವ ನಿರ್ಧಾರಗಳು ಮಹತ್ವದ್ದಾಗಿರಲಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಹೊಸ ತಾಣದಿಂದ ದೇಶದ ಅಭಿವೃದ್ಧಿಯ ಹೊಸ ಪಯಣ ಪ್ರಾರಂಭವಾಗಲಿದೆ ಎಂದರು.

ಇದನ್ನೂ ಓದಿ : ಹಳೆಯ ಸಂಸತ್ ಭವನದ ಕುರಿತು ಭಾವನಾತ್ಮಕ ಪತ್ರ ಬರೆದ ಮಹಿಳಾ ಸಂಸದರು

ಐದು ದಿನಗಳ ಸಂಸತ್ ನ ವಿಶೇಷ ಅಧಿವೇಶನ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನವಾದ ಇಂದು ಹಳೆಯ ಸಂಸತ್ ಕಟ್ಟಡದಲ್ಲಿ ಕೊನೆಯ ಅಧಿವೇಶನ ನಡೆಯಲಿದೆ. ನಾಳೆ ( ಸೆಪ್ಟೆಂಬರ್ 19) ಹೊಸ ಸಂಸತ್ ಕಟ್ಟಡಕ್ಕೆ ಅಧಿವೇಶನ ಸ್ಥಳಾಂತರಗೊಳ್ಳಲಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles