ತುಮಕೂರು: ರೈ ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದು, ಉಡುಪಿ ಮಠಕ್ಕೆ ಯಾವ ಮುಸ್ಲಿಂ ದೊರೆಗಳು ಜಾಗ ಕೊಟ್ಟಿಲ್ಲ, ಜಾಗ ನೀಡಿದ್ದು ರಾಮ ಭೋಜ ಎಂಬ ಅರಸ ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಶ್ರೀ ಮಠಕ್ಕೆ ಮುಸ್ಲಿಂ ದೊರೆಗಳು ಜಾಗ ಕೊಟ್ಟಿದ್ದಾರೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತಿಗೆ ಪ್ರತಿಕ್ರಿಯಿಸಿದರು. ಮಧ್ವಾಚಾರ್ಯರು ಬದರಿ ಯಾತ್ರೆಗೆ ಹೋಗುವಾಗ ಗಂಗಾ ನದಿಯ ದಡದಲ್ಲಿ ತುರುಕರ ರಾಜ ಎದುರಾದಾಗ ಅರ್ಧ ರಾಜ್ಯ ದಾನ ಮಾಡಿದ್ದರು. ಆದರೆ ಉಡುಪಿಯ ಮಠಕ್ಕೆ ಮುಸ್ಲಿಂ ದೊರೆ ಜಾಗ ನೀಡಿದ್ದಲ್ಲ ಎಂದು ಹೇಳಿದ್ದಾರೆ.
ಉಡುಪಿ ಕೃಷ್ಣ ಮಠದ ಜಮೀನನ್ನು ಮುಸಲ್ಮಾನ ದೊರೆ ನೀಡಿದ್ದ ಎಂಬ ಹೇಳಿಕೆಗೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಿಥುನ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.