ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಈ ಬೆನ್ನಲ್ಲೇ ಸೂರ್ಯನತ್ತ ಇಸ್ರೋ ಚಿತ್ತ ನೆಟ್ಟಿದೆ.
ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೌರ (ಸೂರ್ಯ) ಅಧ್ಯಯನದ ಮಿಷನ್ ಆದಿತ್ಯ ಎಲ್ -1 ಕುರಿತು ಮಾಹಿತಿ ನೀಡಿದರು. ಇಸ್ರೋ ಮುಖ್ಯಸ್ಥ ಸೋಮನಾಥನ್ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದರು.
ಇದನ್ನೂ ಓದಿ : ಭಾರತ ಈಗ ‘ಚಂದ್ರನ ಮೇಲಿದೆ’ ; ಇಸ್ರೋ ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಭಾರತ ಏನನ್ನು ಬೇಕಾದರೂ ಸಾಧಿಸಲಿದೆ ಎಂಬುದು ಸಾಬೀತಾಗಿದೆ. ಚಂದ್ರಯಾನ-3ರ ಯಶಸ್ಸಿನ ಬಳಿಕ ಇಸ್ರೋ ಸೂರ್ಯನತ್ತ ಗುರಿಯಿಟ್ಟಿದೆ. ಸೂರ್ಯನ ಅಧ್ಯಯನಕ್ಕಾಗಿ ಅತೀ ಶೀಘ್ರದಲ್ಲಿ ಮಿಷನ್ ಆದಿತ್ಯ ಎಲ್-1 ಉಡಾವಣೆ ಮಾಡಲಾಗುವುದು. ಆ ಬಳಿಕ ನಮ್ಮ ಗುರಿ ವೀನಸ್ (ಶುಕ್ರ) ಆಗಿದೆ ಎಂದು ಪ್ರಧಾನಿ ಹೇಳಿದರು.
ಇಸ್ರೋದ ಆದಿತ್ಯ ಎಲ್-1 ಮಿಷನ್ ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಇಲ್ಲಿಯವರೆಗಿನ ಅತ್ಯಂತ ಸಂಕೀರ್ಣವಾದ ಕಾರ್ಯಾಚರಣೆ ಎಂದು ಪರಿಗಣಿಸಲಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.