Tuesday, March 28, 2023
spot_img
- Advertisement -spot_img

ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು: ಆಸ್ಲೆಟೋಜೆ

ಪ್ರಧಾನಿ ನರೇಂದ್ರ ಮೋದಿಯವರು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹರು ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಉಪ ನಾಯಕ ಆಸ್ಲೆ ಟೋಜೆ ಹೇಳಿದ್ದಾರೆ.

ಮೋದಿಯಂತಹ ಪ್ರಬಲ ನಾಯಕರಿಗೆ ಶಾಂತಿ ಸ್ಥಾಪಿಸುವ ಅಗಾಧ ಸಾಮರ್ಥ್ಯವಿದೆ. ಪ್ರಧಾನಿ ಮೋದಿ ಅತ್ಯಂತ ಶಕ್ತಿಶಾಲಿ ದೇಶದಿಂದ ಬಂದವರು, ಅವರನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ಅವರಲ್ಲಿ ಅಪಾರವಾದ ವಿಶ್ವಾಸಾರ್ಹತೆ ಇದೆ ಎಂದು ಹೇಳಿದ್ದಾರೆ.ಪ್ರಧಾನಿ ಮೋದಿ ಅವರು ಯುದ್ಧವನ್ನು ನಿಲ್ಲಿಸಲು ಅತ್ಯಂತ ವಿಶ್ವಾಸಾರ್ಹ ನಾಯಕರಾಗಿದ್ದಾರೆ ಮತ್ತು ಅವರು ಮಾತ್ರ ಶಾಂತಿ ಸ್ಥಾಪಿಸಲು ಸಾಧ್ಯ ಎಂದು ಹೇಳಿದರು.

ನಾವು ನೊಬೆಲ್ ಶಾಂತಿ ಪ್ರಶಸ್ತಿಗೆ ಹೆಚ್ಚಿನ ಸಂಖ್ಯೆಯ ಭಾರತೀಯ ನಾಮನಿರ್ದೇಶನಗಳನ್ನು ಪಡೆಯುತ್ತಿದ್ದೇವೆ. ನೊಬೆಲ್ ಶಾಂತಿ ಪ್ರಶಸ್ತಿಗೆ ಅಗತ್ಯವಿರುವ ಕೆಲಸವನ್ನು ವಿಶ್ವದ ಪ್ರತಿಯೊಬ್ಬ ನಾಯಕರು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಪ್ರಧಾನಿ ಮೋದಿಯವರ ಆಡಳಿತವನ್ನು ಶ್ಲಾಘಿಸಿ, ಪ್ರಧಾನಿ ಮೋದಿಯವರ ನೀತಿಯಿಂದಾಗಿ ಭಾರತವು ಶ್ರೀಮಂತ ಮತ್ತು ಶಕ್ತಿಯುತ ದೇಶವಾಗುತ್ತಿದೆ ಎಂದು ಹೇಳಿದರು.

ಅಂದಹಾಗೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಸಂಬಂಧಿಸಿದಂತೆ ಭದ್ರತಾ ಮಂಡಳಿಯು ತನ್ನ ಸಭೆಯೊಂದರಲ್ಲಿ ಶಾಂತಿಗಾಗಿ ಭಾರತದ ಪ್ರಯತ್ನ ಹೊಗಳಿತ್ತು.

Related Articles

- Advertisement -

Latest Articles