Wednesday, May 31, 2023
spot_img
- Advertisement -spot_img

ಯುಗಾದಿ ಸಂಭ್ರಮ: ರಾಜ್ಯದ ಜನತೆಗೆ ಶುಭ ಕೋರಿದ ರಾಜಕೀಯ ಗಣ್ಯರು

ಬೆಂಗಳೂರು : ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಾಡಿನ ಸಮಸ್ತ ಜನರಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಬಿಎಸ್ವೈ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಹಲವು ನಾಯಕರು ಶುಭಾಶಯ ಕೋರಿದ್ದಾರೆ.

ನಾಡಿನ ಜನರ ಬದುಕಿನಲ್ಲಿ ಸಿಹಿ ಹೆಚ್ಚಿರಲಿ. ಕಹಿ ಕಡಿಮೆಯಾಗಲಿ. ಸುಖ, ಶಾಂತಿ ನೆಮ್ಮದಿಯ ಬದುಕು ಜನತೆಯದ್ದಾಗಲಿ ಎನ್ನುವ ಹಾರೈಕೆಯೊಂದಿಗೆ ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಯುಗಾದಿ ಹಬ್ಬದ ಶುಭ ಕೋರಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ಯುಗಾದಿ ಹಬ್ಬದ ಶುಭಾಶಯಗಳು. ಭರವಸೆ ಮತ್ತು ಹೊಸ ಆರಂಭಗಳನ್ನು ಒಳಗೊಂಡ ಈ ಹಬ್ಬವು, ಮುಂಬರುವ ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಅಪಾರ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನೂತನ ಸಂವತ್ಸರ ನಾಡಿಗೆ, ನಮ್ಮೆಲ್ಲರ ಬದುಕಿಗೆ ಸುಖ-ಸಮೃದ್ಧಿ, ಉತ್ತಮ ಆರೋಗ್ಯ, ಹೊಸ ಭರವಸೆ, ನವ ಚೈತನ್ಯ ತರಲಿ ಎಂದು ಹಾರೈಸುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮೂಲಕ ಜನತೆಗೆ ಶುಭ ಕೋರಿದ್ದಾರೆ.

”ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು-ಬೆಲ್ಲಗಳ ಸಮಾಗಮವೇ ಬದುಕಿನ ವೈಶಿಷ್ಟ್ಯ ಎಂಬ ಸಂದೇಶದೊಂದಿಗೆ, ಯುಗದ ಹಬ್ಬವನ್ನು ಆಚರಿಸಿ‌ ಸಂಭ್ರಮಿಸೋಣ. ಸರ್ವಜನ ಹಿತದ, ಸಾಮರಸ್ಯದ ಹೊಸ ಬೆಳಕು ನಾಡಿನೆಲ್ಲೆಡೆ ಬೆಳಗಲಿ ಎಂದು ಈ ಶುಭದಿನದಂದು ಹಾರೈಸುತ್ತೇನೆ” ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ ದೇವೇಗೌಡ ಯುಗಾದಿ ಶುಭಾಶಯ ಕೋರಿದ್ದಾರೆ.

ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು. ನಾಡಿನ ಸಮಸ್ತ ಜನತೆಗೆ ನವ ಮನ್ವಂತರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಸಕಲ ಜೀವರಾಶಿಗಳಿಗೂ ಹೊಸ ಜನ್ಮ, ಹೊಸ ಹರುಷ ತರುವ ಈ ಚೈತ್ರವು ಎಲ್ಲರ ಬಾಳಿನಲ್ಲಿ ಸಿಹಿ ಹೆಚ್ಚಿಸಲಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದ್ದಾರೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಈ ಯುಗಾದಿ ನಿಮ್ಮ ಜೀವನದ ಕಹಿ ದೂರ ಮಾಡಲಿ, ಸಿಹಿ ಹೆಚ್ಚಿಸಲಿ. ನವ ಸಂವತ್ಸರ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಹೊಸ ಭರವಸೆ ತರಲಿ ಎಂದು ಶುಭ ಹಾರೈಸುತ್ತೇನೆ” ಎಂದು ಕೆಪಿಸಿಸಿ ಅಧ್ಯಕ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

”ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ. ನಾಡಿನ ಸಮಸ್ತ ಜನತೆಗೆ ಚಾಂದ್ರಮಾನ ಯುಗಾದಿ ಹಬ್ಬದ ಶುಭಾಶಯಗಳು. ಈ ಶೋಭಕೃತ್ ಸಂವತ್ಸರವು ಸರ್ವರಿಗೂ ಶ್ರೇಯಸ್ಸು ತರಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವಂತೆ ಮಾಡಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

”ಸುಖ-ಸಂತಸದ ಸಿಹಿ, ಕಷ್ಟ- ದುಃಖದ ಕಹಿ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯಬೇಕೆನ್ನುವ ಜೀವನ ಸಂದೇಶ ಸಾರುವ ಯುಗಾದಿ ಹಬ್ಬ, ನಾಡಿನಲ್ಲಿ ಬದಲಾವಣೆಯ ಹೊಸಪರ್ವಕ್ಕೆ ಮುನ್ನುಡಿಯಾಗಲಿ. ಯುಗಾದಿ ನಾಡಿಗೆ ಮತ್ತು ನಾಡವಾಸಿಗಳಿಗೆ ಒಳಿತನ್ನು ತರಲಿ. ಯುಗಾದಿಯ ಶುಭಾಶಯಗಳು” ವಿಪಕ್ಷ ನಾಯಕ ಸಿದ್ದರಾಮಯ್ಯ ಯುಗಾದಿಯ ಶುಭಾಶಯ ಕೋರಿದ್ದಾರೆ.

Related Articles

- Advertisement -

Latest Articles