ನವದೆಹಲಿ : ಸಮಸ್ತ ಮುಸ್ಲಿಮರಿಗೆ ರಂಜಾನ್ ಮಾಸದ ಶುಭಾಶಯಗಳು, ಈ ಪವಿತ್ರ ತಿಂಗಳು ಸಮಾಜದಲ್ಲಿ ಹೆಚ್ಚಿನ ಏಕತೆ ಮತ್ತು ಸಾಮರಸ್ಯ ಹೊತ್ತು ತರಲಿ, ಇದು ಬಡವರ ಸೇವೆಯ ಮಹತ್ವ ಪುನರುಚ್ಚರಿಸಲಿ” ಎಂದು ಪ್ರಧಾನಿ ಮೋದಿ ಮುಸ್ಲಿಮರಿಗೆ ರಂಜಾನ್ ಮಾಸಾರಂಭದ ಪ್ರಯುಕ್ತ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಂಜಾನ್ ಕೂಡ ಒಂದು. ಈ ವರ್ಷ ಮಾರ್ಚ್ 22 ರಂದು ರಂಜಾನ್ ಮಾಸ ಪ್ರಾರಂಭವಾಗಿದ್ದು, ಏ. 21 ರಂದು ಕೊನೆಗೊಳ್ಳುತ್ತದೆ. 29 ರಿಂದ 30 ದಿನಗಳವರೆಗೆ ಈ ಮಾಸ ಇರುತ್ತದೆ.