ಮುಂಬೈ: ದಾವೂದಿ ಬೊಹ್ರಾ ಸಮುದಾಯವು ಸಮಯ ಮತ್ತು ಅಭಿವೃದ್ಧಿಯೊಂದಿಗೆ ಯಾವಾಗಲೂ ತನ್ನನ್ನು ತಾನು ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಂಬೈಗೆ ಭೇಟಿ ನೀಡಿದ್ದ ಸಂದರ್ಭ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್ ನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಅಲ್ಜಮಿಯಾ-ತುಸ್-ಸೈಫಿಯಾದಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯೇ ಇದಕ್ಕೆ ಜೀವಂತ ಉದಾಹರಣೆಯಾಗಿದೆ ಎಂದರು. ನಾನು ಇಲ್ಲಿ ಪ್ರಧಾನಿಯಾಗಿ ಅಥವಾ ಸಿಎಂ ಆಗಿ ಬಂದಿಲ್ಲ ಎಂದರು.
ದಾವೂದಿ ಬೊಹ್ರಾ ಸಮುದಾಯವು ಕಾಲಾನಂತರದಲ್ಲಿ ಬದಲಾವಣೆ ಮತ್ತು ಅಭಿವೃದ್ಧಿಯ ಪರೀಕ್ಷೆಯಲ್ಲಿ ಗೆದ್ದಿದೆ, ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ಕಲ್ಪಿಸುವ ಮೂಲಕ ಕೇಂದ್ರವು ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತಂದಿದೆ ಎಂದು ಅಭಿಪ್ರಾಯಪಟ್ಟರು.
ಆಕಾಂಕ್ಷೆಗಳ ಹಿಂದೆ ಒಳ್ಳೆಯ ಉದ್ದೇಶವಿದ್ದಾಗ, ಫಲಿತಾಂಶಗಳು ಯಾವಾಗಲೂ ಧನಾತ್ಮಕವಾಗಿರುತ್ತವೆ, ನಾನು ಈ ಕುಟುಂಬದೊಂದಿಗೆ 4 ತಲೆಮಾರುಗಳಿಂದ ಸಂಪರ್ಕ ಹೊಂದಿದ್ದೇನೆ. ಈ ಎಲ್ಲಾ 4 ತಲೆಮಾರಿನವರು ನನ್ನ ಮನೆಗೆ ಭೇಟಿ ನೀಡಿದ್ದಾರೆ ಎಂದು ನುಡಿದರು.
ನಿಮ್ಮೆಲ್ಲರ ಬಳಿಗೆ ಬಂದಿರುವುದು ಒಂದು ಕುಟುಂಬಕ್ಕೆ ಬಂದಂತೆ ಭಾಸವಾಗುತ್ತಿದೆ. ನಾನು ಇಂದು ನಿಮ್ಮ ವಿಡಿಯೊ ನೋಡಿದೆ.ನೀವು ಪ್ರಧಾನಿ ಅಥವಾ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತೀರಿ. ನಾನು ನಿಮ್ಮ ಕುಟುಂಬದ ಸದಸ್ಯ ಎಂದರು.