Thursday, September 28, 2023
spot_img
- Advertisement -spot_img

Nehru to Modi : ಹಳೆಯ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದ ಪ್ರಧಾನಿ

ನವದೆಹಲಿ : ಭಾರತದ ಸಂಸದೀಯ ಪಯಣದ ದೊಡ್ಡ ಸಾಧನೆ ಎಂದರೆ ‘ಶಾಸಕಾಂಗದ ಮೇಲೆ ನಾಗರಿಕರ ವಿಶ್ವಾಸ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಹೇಳಿದರು. ವಿಶೇಷ ಸಂಸತ್ ಅಧಿವೇಶನದ ಮೊದಲ ದಿನ ಅವರು ಮಾತನಾಡಿದರು.

ಹಳೆಯ ಸಂಸತ್ ಕಟ್ಟಡದಲ್ಲಿ ಇಂದು ಕೊನೆಯ ಅಧಿವೇಶನ ನಡೆಯುತ್ತಿದ್ದು, ನಾಳೆಯಿಂದ ಹೊಸ ಸಂಸತ್ ಭವನಕ್ಕೆ ಅಧಿವೇಶನ ಸ್ಥಳಾಂತರಗೊಳ್ಳಲಿದೆ. ಈ ಹಿನ್ನೆಲೆ ಕಳೆದ 75 ವರ್ಷಗಳಲ್ಲಿ ಸಂಸತ್ ನಡೆದು ಬಂದ ಹಾದಿಯನ್ನು ಪ್ರಧಾನಿ ಮೆಲುಕು ಹಾಕಿದರು. ಹಳೆಯ ಸಂಸತ್ ಕಟ್ಟಡಕ್ಕೆ ತಾನು ಮೊದಲ ಬಾರಿಗೆ ಪ್ರವೇಶಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಅದು ಭಾವನಾತ್ಮಕ ಕ್ಷಣವಾಗಿತು. ಜನರಿಂದ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದರು.

ಜಿ 20 ಸರ್ವ ಭಾರತೀಯರ ಯಶಸ್ಸು : ಜಿ20 ಶೃಂಗಸಭೆಯ ಯಶಸ್ಸನ್ನು ದೇಶವಾಸಿಗಳಿಗೆ ಅರ್ಪಿಸಿದ ಪ್ರಧಾನಿ, ಜಿ20 140 ಕೋಟಿ ಭಾತೀಯ ನಾಗರಿಕರ ಯಶಸ್ಸು, ಯಾವುದೋ ಒಬ್ಬ ವ್ಯಕ್ತಿ ಅಥವಾ ಪಕ್ಷದಲ್ಲ ಎಂದು ಹೇಳಿದರು.

ನೆಹರು ಸ್ಫೂರ್ತಿ : 75 ವರ್ಷಗಳ ಸಂಸದೀಯ ಪಯಣ ನೆನೆದ ಪ್ರಧಾನಿ, ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ನೆನಪಿಸಿಕೊಂಡರು. ಪಂಡಿತ್ ನೆಹರು ನಮಗೆ ‘ಸ್ಫೂರ್ತಿ’ ಎಂದು ಹೇಳಿದರು. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ, ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಸಂವಿಧಾನದ ವಿಧಿ 370ರ ರದ್ದು ಇತ್ಯಾದಿ ಹಳೆಯ ಸಂಸತ್ ಕಟ್ಟಡದಲ್ಲಿ ತೆಗೆದುಕೊಂಡ ಐತಿಹಾಸಿಕ ನಿರ್ಣಯಗಳನ್ನು ಮೆಲುಕು ಹಾಕಿದರು.

ಹಳೆಯ ಸಂಸತ್ ಕಟ್ಟಡಕ್ಕೆ ಭಾವನಾತ್ಮಕ ವಿದಾಯ: ಹಳೆಯ ಸಂಸತ್ ಕಟ್ಟಡದ ಕುರಿತು ಮಾತನಾಡಿದ ಪ್ರಧಾನಿ, ಈ ಕಟ್ಟಡಕ್ಕೆ ವಿದಾಯ ಹೇಳುವುದು ಒಂದು ಭಾವನಾತ್ಮಕ ಕ್ಷಣವಾಗಿದೆ. ಅನೇಕ ಕಹಿ-ಸಿಹಿ ನೆನಪುಗಳು ಇದರೊಂದಿಗೆ ಸೇರಿಕೊಂಡಿವೆ. ನಾವೆಲ್ಲರೂ ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಸಾಕ್ಷಿಯಾಗಿದ್ದೇವೆ. ಅದೇ ಸಮಯದಲ್ಲಿ ನಮ್ಮಲ್ಲಿ ‘ಪರಿವಾರ ಭಾವ’ವನ್ನು ನೋಡಿದ್ದೇವೆ. ಈ ಎಲ್ಲಾ ನೆನಪುಗಳು ನಮ್ಮ ಹಂಚಿಕೆಯ ಪರಂಪರೆಗೆ ಸಾಕ್ಷಿಯಾಗಿವೆ ಎಂದರು.

7,500 ಸಂಸದರು ಸಂಸತ್​ನಲ್ಲಿ ಸೇವೆ ಸಲ್ಲಿಸಿದ್ದಾರೆ : ನೂತನ ಸಂಸತ್​ ಭವನದ ಪ್ರವೇಶದ ದ್ವಾರದಲ್ಲಿ ‘ಜನರಿಗಾಗಿ ಬಾಗಿಲು ತೆರೆಯಿರಿ’ ಎಂಬ ವಾಕ್ಯವಿದೆ. ಋಷಿ ಮುನಿಗಳು ಇದನ್ನು ಬರೆದಿದ್ದಾರೆ. ಆರಂಭದಲ್ಲಿ ಸಂಸತ್ ನಲ್ಲಿ ಮಹಿಳಾ ಸದಸ್ಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ದಿನ ಕಳೆದಂತೆ ಮಹಿಳಾ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಿದೆ. ಈವರೆಗೂ 7,500 ಸಂಸದರು ಸಂಸತ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. 600ಕ್ಕೂ ಹೆಚ್ಚು ಮಹಿಳೆಯರು ಸಂಸತ್​​ನ ಗೌರವ ಹೆಚ್ಚಿಸಿದ್ದಾರೆ. ಎರಡೂ ಸದನಗಳ ಸದಸ್ಯರು ಸಂಸತ್ ಮೂಲಕ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಚಂದ್ರಯಾನ-3, ಸೂರ್ಯಾಯಾನದ ಸಾಧನೆಯನ್ನು ಮತ್ತೊಮ್ಮೆ ಕೊಂಡಾಡಿದ ಪ್ರಧಾನಿ, ನಮ್ಮ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗಿ ನೋಡುತ್ತಿದೆ ಶ್ಲಾಘನೆ ವ್ಯಕ್ತಪಡಿಸಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles