ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮುಂದಿನ ವಾರ ಐತಿಹಾಸಿಕ ಜಿ20 ಜಾಗತಿಕ ನಾಯಕರ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದಲ್ಲಿ ಜಿ20 ಸಭೆ ನಡೆಸಿರುವುದನ್ನು ಮುಂದಿಟ್ಟು ಚೀನಾ ಮತ್ತು ಪಾಕಿಸ್ತಾನ ಚಕಾರವೆತ್ತಿದೆ. ನೆರೆಯ ರಾಷ್ಟ್ರಗಳ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಪ್ರತಿಯೊಂದು ಭಾಗದಲ್ಲೂ ಸಭೆ ನಡೆಸುವುದು ಸಹಜ ಎಂದು ಹೇಳಿದ್ದಾರೆ.
ಈ ವರ್ಷದ ಮಾರ್ಚ್ 26 ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮತ್ತು ಆ ಬಳಿಕ ಕಾಶ್ಮೀರದಲ್ಲಿ ಜಿ 20 ಸಭೆಗಳು ನಡೆದಿವೆ. ಈ ಸಭೆಗೆ ಜಿ20 ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನ ಗೈರಾಗಿತ್ತು. ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ಸರ್ಕಾರ, ಅರುಣಾಚಲದ ಮೇಲೆ ಭಾರತದ ಸಾರ್ವಭೌಮತ್ವವನ್ನು ಒಪ್ಪುವುದಿಲ್ಲ. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಒಂದು ಭಾಗ ಎಂದು ವಾದಿಸಿದೆ.
ಇದನ್ನೂ ಓದಿ : G20 Summit-23: ಸೆ.8ರಂದು ಮೋದಿ-ಬೈಡೆನ್ ದ್ವಿಪಕ್ಷೀಯ ಮಾತುಕತೆ
ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಡಿರುವ ಬಗ್ಗೆ ಹೆಮ್ಮೆಯಿದೆ ಎಂದಿರುವ ಪ್ರಧಾನಿ ಮೋದಿ. ಈ ಜಾಗತಿಕ ಕಾರ್ಯಕ್ರಮದ ಕೆಲವೊಂದು ಪರಿಣಾಮಗಳು ನನ್ನ ಹೃದಯ ಸಾಮಿಪ್ಯ ಹೊಂದಿದೆ ಎಂದಿದ್ದಾರೆ.
ಜಿ20 ಅಧ್ಯಕ್ಷತೆ ಇರಲಿ, ಇಲ್ಲದಿರಲಿ ಪ್ರಪಂಚದಾದ್ಯಂತ ಶಾಂತಿ ಕಾಪಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ನಮ್ಮ ಜಿ20 ಅಧ್ಯಕ್ಷತೆಯ ಅವಧಿಯ ರಚನಾತ್ಮಕ ಕೊಡುಗೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.