ನವದೆಹಲಿ: ಪ್ರಧಾನಿ ಮೋದಿ ಇಂದು ದೇಶವನ್ನು ಉದ್ದೇಶಿಸಿ 104ನೇ ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮ ಆರಂಭಗೊಳ್ಳಲಿದೆ.
ಈ ಕುರಿತು ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ’11 ಗಂಟೆಗೆ ಟ್ಯೂನ್ ಮಾಡಿ ಭಾರತದಾದ್ಯಂತ ಕಾಣಸಿಗುವ ಸ್ಫೂರ್ತಿದಾಯಕ ಜೀವನ ಪ್ರಯಾಣಗಳನ್ನು ಹೈಲೆಟ್ ಮಾಡಲು ನಾವು ಯಾವಾಗಲೂ ಉತ್ಸುಕರಾಗಿರುತ್ತೇವೆ’ ಎಂದಿದ್ದಾರೆ.
ಇದನ್ನೂ ಓದಿ: ‘ಇಸ್ರೋ ಬಿಜೆಪಿಯ 2024ರ ಚುಣಾವಣೆಯ ಪ್ರಚಾರ ಅಸ್ತ್ರವಾಗಿದೆ’
‘ಮನ್ ಕಿ ಬಾತ್’ ನ 103ನೇ ಆವೃತ್ತಿಯನ್ನು ಜುಲೈ 30ರಂದು ಪ್ರಸಾರ ಮಾಡಲಾಗಿತ್ತು. ಈ ವೇಳೆ ಪ್ರಧಾನಿ ಮೋದಿ ಮೊದಲ ಬಾರಿಗೆ ‘ಮೇರಿ ಮಾತಿ ಮೇರಾ ದೇಶ್‘ ಅಭಿಯಾನ ಕುರಿತು ಪ್ರಸ್ತಾಪಿಸಿದ್ದರು.
ಈ ಮನ್ ಕಿ ಬಾತ್ ಕಾರ್ಯಕ್ರಮವು ಅಕ್ಟೋಬರ್ 3, 2014ರಂದು ಪ್ರಾರಂಭಗೊಂಡಿತ್ತು. ಅಲ್ಲದೆ ಏಪ್ರಿಲ್ 30, 2023 ರಂದು ಅದರ 100ನೇ ಸಂಚಿಕೆ ಪ್ರಸಾರ ಮಾಡಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.