ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟಗಳ (ಆಸಿಯಾನ್) ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ನಾಳೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 7 ರಂದು ಇಂಡೋನೇಷ್ಯಾದಲ್ಲಿ ಈ ಶೃಂಗಸಭೆ ನಡೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 6 ರಂದು ರಾತ್ರಿ ಇಂಡೋನೇಷ್ಯಾಕ್ಕೆ ತೆರಳಲಿದ್ದು, ಮರುದಿನ ಸಂಜೆ ನವದೆಹಲಿಗೆ ಹಿಂತಿರುಗುತ್ತಾರೆ.
ಇದನ್ನೂ ಓದಿ: ಎರಡು ಕಡೆ ಮತದಾನದ ಹಕ್ಕು ಆರೋಪ; ದೆಹಲಿ ಸಿಎಂ ಕೇಜ್ರಿವಾಲ್ ಪತ್ನಿಗೆ ಕೋರ್ಟ್ ಸಮನ್ಸ್!
ಗುರುವಾರ ಜಕಾರ್ತಾದಲ್ಲಿ ನಡೆಯಲಿರುವ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪ್ರಮುಖವಾಗಿ ಸಮುದ್ರ ಮಾರ್ಗ ಭದ್ರತೆಯ ಕುರಿತು ಹೊಸ ಒಪ್ಪಂದ ನಿರೀಕ್ಷಿಸಲಾಗಿದೆ. ನವದೆಹಲಿಯಲ್ಲಿ ನಿಗದಿಯಾಗಿರುವ ಜಿ-20 ಶೃಂಗಸಭೆಗೂ ಮುನ್ನ ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ದೆಹಲಿ ಶೃಂಗಸಭೆಯ ದಿನಾಂಕ ಗಮನದಲ್ಲಿಟ್ಟುಕೊಂಡು ಇಂಡೋನೇಷ್ಯಾ ಈ ದಿನಾಂಕ ನಿಗದಿ ಮಾಡಿದೆ.
ಇದನ್ನೂ ಓದಿ: ಫ್ಲ್ಯಾಟ್ ಹೆಸರಲ್ಲಿ ವಂಚನೆ ಕೇಸ್; ಸಂಸದೆ ನುಸ್ರತ್‌ಗೆ ಸಮನ್ಸ್
ಭಾರತ ಮತ್ತು ಇಂಡೋನೇಷ್ಯಾ ಆಗಸ್ಟ್‌ನಲ್ಲಿ ಎರಡು ಖಾಸಗಿ ವಿಮಾನಯಾನ ಸಂಸ್ಥೆಗಳ ಮೂಲಕ ನೇರ ವಿಮಾನಯಾನ ಸೇವೆ ಪ್ರಾರಂಭಿಸಿದ್ದವು ಮತ್ತು ಭಾರತವು ವಿಯೆಟ್ನಾಂಗೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. 2022-23ರ ಅವಧಿಯಲ್ಲಿ ಭಾರತ-ಆಸಿಯಾನ್ ವ್ಯಾಪಾರವು 131.5 ಶತಕೋಟಿ ಡಾಲರ್‌ಗೆ ಹೆಚ್ಚಳವಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.