ಬೆಂಗಳೂರು: ಇಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಷ್ಟ್ ಕರ್ನಾಟಕ 2022ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ರು. ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೊದಿ, ವಿಶ್ವದ ಮೂಲೆ ಮೂಲೆಯಿಂದ ಬಂದಿರುವ ಎಲ್ಲಾ ಹೂಡಿಕೆದಾರರಿಗೆ ಸ್ವಾಗತ. ಇದು ಸಂಪ್ರದಾಯ ಮತ್ತು ತಂತ್ರಜ್ಙಾನ ಒಳಗೊಂಡ ಪ್ರದೇಶ, ಪ್ರತಿಭೆ ಮತ್ತು ತಂತ್ರಜ್ಞಾನ ಎಂದರೆ ನಮಗೆ ಮೊದಲು ಮನಸ್ಸಿಗೆ ಬರೋದು ಬೆಂಗಳೂರು ಎಂದು ಹೇಳಿದರು.
ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿದ ಮೋದಿ:-
ವಿಶ್ವದ ಹೂಡಿಕೆದಾರರಿಗೆ ವೆಲ್‌ಕಮ್ ಟು ಇಂಡಿಯಾ ವೆಲ್‌ಕಮ್ ಟು ನಮ್ಮ ಕರ್ನಾಟಕ, ವೆಲ್‌ಕಮ್ ಟು ನಮ್ಮ ಬೆಂಗಳೂರು’ ಎಂದ ಪ್ರಧಾನಿ ಮೋದಿ ನಂತರ ನಿನ್ನೆಯಷ್ಟೇ ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸಲಾಗಿದೆ. ಎಲ್ಲಾ ನನ್ನ ಕನ್ನಡಿಗರಿಗೂ ಅಭಿನಂದನೆಗಳೂ ಎಂದು ಮಾತು ಆರಂಭಿಸಿದರು. ದೇಶದ ಅರ್ಥ ವ್ಯವಸ್ತೆ ಈಗ ಸುಧಾರಣೆಯಾಗುತ್ತಿದೆ. ಅರ್ಥ ವ್ಯವಸ್ತೆಯ ಸುಧಾರಣೆಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಭಾರತದ ಶಕ್ತಿ ಇಡಿ ವಿಶ್ವಕ್ಕೆ ಗೊತ್ತಾಗಿದೆ. ದೇಶದಲ್ಲಿ ಊದ್ಯೋಗ ಸೃಷ್ಟಿಯಾಗುತ್ತಿದೆ’ ಇದು ಭಾರತದ ಪಾಲಿಗೆ ಅಮೃತದ ಕಾಲವಾಗಿದೆ. ಅಮೃತಮಹೋತ್ಸವಕಾಲದಲ್ಲಿ ನಾವು ಕೋವಿಡ್ ನಂತರದಲ್ಲಿಭಾರತದ ಆರ್ಥಿಕತೆ ಮೂಂಚೂಣಿಯಲ್ಲಿದೆ. ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ಸಾಕಷ್ಟಿದೆ ಎಂದು ಪ್ರಧಾನಿ ಹೇಳಿದರು. ನವ ಭಾರತದ ಹೊಸ್ತಿಲ್ಲಿದ್ದೇವೆ. ದೇಶದ ಯುವಕರು ಅನೇಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೊಸ ಹೊಸ ಉದ್ಯೋಗಗಳು ದೇಶದಲ್ಲಿ ಸೃಷ್ಟಿಯಗುತ್ತಿದೆ ಎಂದರು.
ಡಬಲ್ ಎಂಜಿನ್ ಸರ್ಕಾರ ಎಂದ ಮೋದಿ:-
ಇನ್ನು ಮುಂದುವರೆದು ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ , ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದೇಶದಲ್ಲೇ ಮುಂಚುಣಿಯಲ್ಲಿದೆ. ಕೇಂದ್ರಸರ್ಕಾರ ರಾಜ್ಯದ ಅಭಿವೃದ್ಧಿಗೆ ಸಾಥ್ ನೀಡುತ್ತಿದೆ ಎಂದರು