Thursday, September 28, 2023
spot_img
- Advertisement -spot_img

Live Updates : ಆಗಸ್ಟ್ 23 ರನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ ಪಿಎಂ

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದು.ಪೀಣ್ಯದ ಇಸ್ರೋ ಕೇಂದ್ರ ಕಚೇರಿ ತಲುಪಿದ್ದಾರೆ.

8:39 : ಈಗ ಚಂದ್ರನವರೆಗೂ ತಲುಪಿದ ‘ಮೇಕ್​ ಇನ್​ ಇಂಡಿಯಾ’

ಈ ತಿರಂಗ ಪಾಯಿಂಟ್​​​ ಮುಂದಿನ ಸಾಧನೆಗಳಿಗೆ ಪ್ರೇರಣೆಯಾಯಿತು. ಚಂದ್ರಯಾನ-3 ಯಶಸ್ಸಿನಲ್ಲಿ ಇಸ್ರೋ ಸಾಧನೆ ದೊಡ್ಡದು. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ ಎಂದರು.

8:24 : ಆಗಸ್ಟ್ 23 ರನ್ನು ‘ರಾಷ್ಟೀಯ ಬಾಹ್ಯಾಕಾಶ ದಿನ’

ಆಗಸ್ಟ್ 23 ರನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದ ಪಿಎಂ ಮೋದಿ. ಈ ದಿನ ಚಂದ್ರಯಾನ – 3 ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದು ಇತಿಹಾಸ ಸೃಷ್ಟಿಸಿತ್ತು

8:23 : ಚಂದ್ರಯಾನ-2 ಪತನ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ಕರೆಯೋಣ

ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯೋಣ. ಶಿವನಲ್ಲಿ ಮಾನವ ಶಕ್ತಿಯನ್ನು ರೂಪಿಸುವ ಶಕ್ತಿ ಇದೆ. ಚಂದ್ರನ ಮೇಲೂ ತಿರಂಗ ರಾರಾಜಿಸುತ್ತಿದೆ, ಚಂದ್ರಯಾನ-2 ಪತನ ಸ್ಥಳಕ್ಕೆ ತಿರಂಗ ಪಾಯಿಂಟ್​ ಎಂದು ಹೆಸರಿಟ್ಟರು.

8:18 AM : ವಿಕ್ರಮ್​ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರಿಟ್ಟ ಮೋದಿ

ಪ್ರಧಾನಿ ನರೇಂದ್ರ ಮೋದಿ, ಚಂದ್ರಯಾನ-3 ರ ಚಂದ್ರನ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂದು ನಾಮಕರಣ ಮಾಡಿದರು. ಜತೆಗೆ, ಚಂದ್ರಯಾನ-3 ಯಶಸ್ಸಿಗೆ ಮಹಿಳಾ ವಿಜ್ಞಾನಿಗಳ ಕೊಡುಗೆಯೂ ಇದೆ ಎಂದು ಮಹಿಳಾ ವಿಜ್ಞಾನಿಗಳನ್ನು ಕೊಂಡಾಡಿದರು.

8:15 AM : ಇಸ್ರೋ ವಿಜ್ಞಾನಿಗಳನ್ನು ಹಾಡಿಹೊಗಳಿದ ಪಿಎಂ ಮೋದಿ

ಇಸ್ರೋ ಕಮಾಂಡ್​ ಸೆಂಟರ್​ನಲ್ಲಿ ಮಾತನಾಡುತ್ತಿರುವ ಪಿಎಂ ಮೋದಿ, ನಿಮ್ಮ ಸಾಧನೆಯನ್ನು ಎಷ್ಟೇ ಕೊಂಡಾಡಿದರೂ ಅದು ಕಡಿಮೆಯೇ. ಚಂದ್ರನ ಮೇಲೆ ಪ್ರಜ್ಞಾನ್​ ಪರಾಕ್ರಮ ಕಂಡು ಖುಷಿಯಾಗಿದೆ. ಇಡೀ ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ ಎಂದರು.

8:05 AM : ವಿಜ್ಞಾನಿಗಳ ಸಾಧನೆ ಭಾವುಕರಾದ ಪಿಎಂ ಮೋದಿ

ಇನ್ನು ಮುಂದುವರೆದು ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದು ಹೇಳುವ ವೇಳೆ ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಮಂತ್ರಿ ಮೋದಿ ಭಾವುಕರಾದರು. ಪ್ರತಿಯೊಬ್ಬ ವಿಜ್ಞಾನಿಗೂ ನನ್ನಿಂದ ಸಲ್ಯೂಟ್​​. ನಿಮ್ಮ ಧೈರ್ಯ, ಶಕ್ತಿ, ಶ್ರಮ, ಸಾಮರ್ಥ್ಯಕ್ಕೆ ನನ್ನ ನಮನಗಳು ಎಂದು ಮೋದಿ ಹೇಳಿದರು. ಸದ್ಯ ಭಾರತ ಚಂದ್ರನ ಮೇಲಿದೆ. ದೇಶದ ಘನತೆಯನ್ನು ಉತ್ತುಂಗಕ್ಕೇರಿಸಿದ್ದಕ್ಕೆ ಧನ್ಯವಾದಗಳು ಎಂದರು.

8:03 AM : ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ

ಪೀಣ್ಯದ ಇಸ್ರೋ ಕಮಾಂಡ್​ ಸೆಂಟರ್​ನಲ್ಲಿ ವಿಜ್ಞಾನಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿಯಾ ಪಿಎಂ, ನಿಮ್ಮನ್ನು ಭೇಟಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ ಎಂದರು.

7:56 AM : ಇಸ್ರೋ ಕಚೇರಿಯಲ್ಲಿ ಪಿಎಂ ಮೋದಿ ಭಾಷಣ

ವಿಜ್ಞಾನಿಗಳನ್ನ ಉದ್ದೇಶಿಸಿ ಪಿಎಂ ಮೋದಿ ಭಾಷಣ ಮಾಡುತ್ತಿದ್ದಾರೆ.

7:52 AM : ವಿಜ್ಞಾನಿಗಳ ಜೊತೆ ಪಿಎಂ ಸಂವಾದ

ವಿಜ್ಞಾನಿಗಳ ಜೊತೆ ಪಿಎಂ ಮೋದಿ ಸಂವಾದ ನಡೆಸುತ್ತಿದ್ದಾರೆ.

7:50 AM : ವಿಕ್ರಂ ಲ್ಯಾಂಡರ್ ಬಗ್ಗೆ ವಿಶ್ಲೇಷಣೆ

ನಂತರ ಇಸ್ರೋ ಕಚೇರಿಯಲ್ಲಿ ವಿಕ್ರಂ ಲ್ಯಾಂಡರ್ ಬಗ್ಗೆ ವಿಶ್ಲೇಷಣೆ ಮಾಡಿದರು. ಪ್ರಜ್ಞಾನ್​ ರೋವರ್​​ ಕಾರ್ಯನಿರ್ವಹಣೆ, ಅನ್ವೇಷಣೆ ಬಗ್ಗೆ ಮಾಹಿತಿ ನೀಡಿದರು.

7:49 AM : ಮೋದಿಯವರನ್ನ ಸ್ವಾಗತ ಮಾಡಿಕೊಂಡ ಇಸ್ರೋ ಅಧ್ಯಕ್ಷ

ಮೋದಿಯವರನ್ನ ಹೂಗುಚ್ಛ ನೀಡಿ ಸ್ವಾಗತ ಮಾಡಿಕೊಂಡ ಇಸ್ರೋ ಅಧ್ಯಕ್ಷ ಸೋಮನಾಥನ್, ಇಸ್ರೋ ಕಚೇರಿಯಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಯು.ಆರ್. ರಾವ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಎಂ. ಶಂಕರನ್ ಮತ್ತು ಇಸ್ಟ್ರಾಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಅವರಿಗೆ ಮಾತ್ರ ಪ್ರಧಾನಿ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ.

7:43 AM : ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ

ಇಸ್ರೋ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನ ಸ್ವಾಗತಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್

7:37 AM

ಇಸ್ರೋ ಕಚೇರಿಯಲ್ಲಿ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಸುಮಾರು 45 ನಿಮಿಷ ಮಾತುಕತೆ ನಡೆಸಲಿದ್ದಾರೆ.

7:36 AM

ಪೀಣ್ಯದ ಇಸ್ರೋ ಕೇಂದ್ರ ಕಚೇರಿ ತಲುಪಿದ ಪಿಎಂ ಮೋದಿ.

ಈ ಬಗ್ಗೆ ಶಾಸಕ ಮುನಿರತ್ನ ಮಾತನಾಡಿ ಇಂತಹ ಪ್ರಧಾನಿಯನ್ನ ಪಡೆದಿರೋದು ನಮ್ಮ ಪುಣ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.

7:21 AM

ಜಾಲಹಳ್ಳಿ ಕ್ರಾಸ್ ಬಳಿ ಪಿಎಂ ಮೋದಿ ಅವರ ವಾಹನ ನಿಲ್ಲಿಸಿ ಅಲ್ಲಿ ನೆರೆದಿದ್ದ ಸಾರ್ವಜನಿಕರತ್ತ ಕೈಬೀಸುತ್ತ ಮುನ್ನೆಡರು.

ಅಲ್ಲಿ ನೆರೆದಿದ್ದ ಜನ ಮೋದಿ.. ಮೋದಿ.. ಮೋದಿ ಎಂದು ಜೈಕಾರ ಹಾಕುತ್ತ, ಡೋಲು, ತಮಟೆ ತ್ರಿವರ್ಣ ಧ್ವಜ ಹಿಡಿದು ಮೋದಿಯವರನ್ನ ಸ್ವಾಗತಿಸಿದರು.

6:00 AM

ಹೆಚ್ ಎಎಲ್ ಮುಂಭಾಗದಲ್ಲಿ ಮೋದಿ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ.

ಹೆಚ್ ಎಎಲ್ ಮುಂಭಾಗದಲ್ಲಿ ಮೋದಿ ಸ್ವಾಗತಕ್ಕೆ ಭರ್ಜರಿ ತಯಾರಿ

ಸಾಮಾನ್ಯ ಕಾರ್ಯಕರ್ತನಂತೆ ಪ್ರಧಾನಿ ಮೋದಿ ಆಗಮನಕ್ಕೆ ಕಾಯುತ್ತಿರುವ ತೇಜಸ್ವಿ ಸೂರ್ಯ

6:07 AM

ಗ್ರೀಸ್‌ ರಾಜಧಾನಿ ಅಥೆನ್ಸ್‌ನಿಂದ ಪ್ರಧಾನಿ ಮೋದಿ ಎಚ್‌ಎಎಲ್‌ ವಿಮಾನಕ್ಕೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಸುಮಾರು ಅರ್ಧ ಗಂಟೆ ಏರ್ಪೋರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಾರೆ.

6:10 AM

ಸಾಮಾನ್ಯ ಜನರಂತೆ ಜನರ ಮಧ್ಯದಲ್ಲಿ ನಿಂತ ಸಂಸದ ತೇಜಸ್ವಿ ಸೂರ್ಯ

ಸಂಸದ ತೇಜಸ್ವಿ ಸೂರ್ಯ ಜೊತೆ ಸೆಲ್ಫಿ ತೆಗೆದುಕೊಂಡ ಬಿಜೆಪಿ ಕಾರ್ಯಕರ್ತರು

6:15 AM

ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ಇಸ್ರೋ ಮುಂಭಾಗ ಪೊಲೀಸ್ ಭಿಗಿ ಬಂದೋಸ್ತ್ ಮಾಡಲಾಗಿದ್ದು. ರಸ್ತೆಯುದ್ದಕ್ಕೂ 2000ಕ್ಕೂ ಅಧಿಕ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಬೆಂಗಳೂರು ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಪ್ರಧಾನಿ ನರೇಂದ್ರ ಮೋದಿಯವರ ಸ್ವಾಗತಕ್ಕಾಗಿ ಕಾರ್ಯಕರ್ತರ ಜೊತೆ ಎಚ್‌ಎಎಲ್‌ನಲ್ಲಿ ಕಾಯುತ್ತಿದ್ದಾರೆ.

6:25 AM

ಬೆಂಗಳೂರಿಗೆ ಬಂದಿರುವ ಬಗ್ಗೆ ಟ್ವಿಟ್ ಮಾಡಿರುವ ಪಿಎಂ ಮೋದಿ, ನಾನು ಬೆಂಗಳೂರಿಗೆ ಬಂದಿಳಿದಿದ್ದು. ನಮ್ಮ ಇಸ್ರೋ ಚಂದ್ರಯಾನ-3 ಯಶಸ್ಸಿನ ಹಿಂದಿರುವ ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಲು ತುಂಬಾ ಕಾತುರದಲ್ಲಿದ್ದೇನೆ. ಭಾರತಕ್ಕೆ ಹೆಮ್ಮೆ ತಂದ ವಿಜ್ಞಾನಿಗಳ ಕೊಡುಗೆ, ಅವರ ಸಮರ್ಪಣೆ ಮತ್ತು ಉತ್ಸಾಹವು ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ರಾಷ್ಟ್ರದ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

6:27 AM

ಪಿಎಂ ಮೋದಿ ಬರುತ್ತಿರುವ ಬಗ್ಗೆ ಮಾತನಾಡಿದ ಯಲಹಂಕ ಶಾಸಕ ವಿಶ್ವನಾಥ್, ಇಸ್ರೋ ಸಾಧನೆಯನ್ನ ಮೆಚ್ಚಿ ಪ್ರಧಾನಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಇದರಲ್ಲೂ ರಾಜಕಾರಣ ಮಾಡ್ತಿರೋದು ಸರಿಯಲ್ಲ.
ಮೊಸರಲ್ಲಿ ಕಲ್ಲು ಹುಡುಕೋ ಕೆಲ್ಸ ಮಾಡ್ತಿರೋದು ಸರಿಯಲ್ಲ. ಇಂಥದ್ರಲ್ಲಿ ರಾಜಕಾರಣ ಮಾಡೋರ ಬಗ್ಗೆ ಏನೂ ಮಾತನಾಡೋಲ್ಲ. ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕೋ ಕೆಲ್ಸ ಮಾಡ್ತಿದ್ದಾರೆ. ಬ್ರಿಟಿಷರ ವಿರುದ್ಧ ನಮವರೇ ಪಿತೂರಿ ಮಾಡಿದ್ರು. ಅದೇ ರೀತಿ ಇಂಥ ವಿಚಾರದಲ್ಲಿ ರಾಜಕಾರಣ ಮಾಡ್ತಿದ್ದಾರೆ.

6:30 AM

ಮುಂಜಾನೆ 3 ರಿಂದಲೇ ಹೆಚ್ ಎಎಲ್ ವಿಮಾನ ನಿಲ್ದಾಣ ಬಳಿ ಬೀಡು ಬಿಟ್ಟಿರುವ ಸಾವಿರಾರು ಕಾರ್ಯಕರ್ತರು

ಬೀಡು ಬಿಟ್ಟಿರುವ ಸಾವಿರಾರು ಕಾರ್ಯಕರ್ತರು

6:33 AM

ಪಿಎಂ ಮೋದಿಗೆ ಸ್ವಾಗತ ಕೋರಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ.

ಇದೇ ವೇಳೆ ಪೊಲೀಸ್ ಕಮಿಷನರ್ ದಯಾನಂದ್, ಸೇರಿ ಹಲವು ಅಧಿಕಾರಿಗಳ ಉಪಸ್ಥಿತಿ.

6:41 AM

ಇನ್ನೇನು ಕೆಲವೆ ಕ್ಷಣಗಳಲ್ಲಿ ಪ್ರಧಾನಿ ಮೋದಿಯವರು ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಬಿಜೆಪಿಯವರು ಹೆಚ್ ಎಎಲ್ ಹೊರಗಡೆ ವೇದಿಕೆ ಸಿದ್ಧಪಡಿಸಿದ್ದಾರೆ.

6:45 AM

ಹೆಚ್ ಎಎಲ್ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಆರ್. ಅಶೋಕ್, ಮೋದಿಯವರು ಕಾಟಾಚಾರಕ್ಕೆ ಬರ್ತಿಲ್ಲ ನೋಡಿ. ವಿದೇಶದಿಂದ ದೆಹಲಿಗೂ ತೆರಳದೆ ಬೆಂಗಳೂರಿಗೆ ಬರ್ತಿದ್ದಾರೆ. ಮೋದಿ ಅವರ ಆದ್ಯತೆ ಯಾವುದು, ಸಿದ್ದರಾಮಯ್ಯ ಅವರ ಆದ್ಯತೆ ಯಾವುದು ಅನ್ನೋದಿ ಗೊತ್ತಾಗುತ್ತೆ. ಮೋದಿ ಅವರ ಕಾರ್ಯಬದ್ಧತೆ ಏನು ಅನ್ನೋದು ಗೊತ್ತಾಗುತ್ತೆ. ಕಾಂಗ್ರೆಸ್ ಗೆ ಮೋದಿ ಕಂಡರೆ ಆಗಲ್ಲ. ವಿಜ್ಞಾನಿಗಳ ಕಂಡರೆ ಆಗಲ್ಲ. ದೇಶ, ರಾಜ್ಯ ಮುಂದುವರೆಯಬೇಕು ಅನ್ನೋದು ಇಷ್ಟವಿಲ್ಲ. ಇದು ಪಾರ್ಟಿ ಕಾರ್ಯಕ್ರಮ ಅಲ್ಲ. ಇದು ದೇಶದ ಕಾರ್ಯಕ್ರಮ ದೇಶ ಮೊದಲು, ಆಮೇಲೆ ಪಾರ್ಟಿ. ಕಾಂಗ್ರೆಸ್ ರೀತಿ ಸೋನಿಯಾ ಮೊದಲು ಅಂತ ಹೇಳ್ತಿಲ್ಲ ಎಂದು ಗುಡುಗಿದ್ದಾರೆ.

6:47 AM

ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಜೈ ವಿಜ್ಞಾನ.. ಜೈ ವಿಜ್ಞಾನ. ಜೈ ಜವಾನ್.. ಜೈ ಜವಾನ್ ಎಂದು ಘೋಷಣೆ ಕೂಗಿದರು. ದೇಶದ ವೈಜ್ಞಾನಿಕ ಸಾಧನೆಯಿಂದ, ಇಡೀ ದೇಶ ಹೆಮ್ಮೆ ಪಡುವಂತಹ ಸಂಗತಿಯಾಗಿದೆ.

6:50 AM

ಬೆಳಗ್ಗೆಬೆಳಗ್ಗೆ ಇಲ್ಲಿ ಬಂದು ನೆರೆದಿರುವುದು ನೋಡಿದ್ರೆ ತುಂಬಾ ಖುಷಿ ಆಗುತ್ತದೆ. ಗ್ರೀಸ್ ನಿಂದ ನಾನು ನೇರವಾಗಿ ದೆಹಲಿಗೆ ಹೋಗಬೇಕಿತ್ತು. ಆದ್ರೆ, ನಾನು ಬೆಂಗಳೂರಿಗೆ ಬರುವ ಮನಸ್ಸು ಮಾಡಿದೆ ಎಂದರು.

6:53 AM

ಸಿಎಂ, ಡಿಸಿಎಂಗೆ ಬರಬೇಡಿ ಎಂದು ನಾನೆ ಹೇಳಿದ್ದೆ. ನಾನು ಹೇಳಿದೆ ಬೇಗ ಬಂದು ಹೋಗ್ತೀನಿ. ಅಷ್ಟು ಬೇಗ ಯಾಕೆ ಬರ್ತಿರಾ ಎಂದು ಹೇಳಿದ್ದೆ. ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿ ಹೋಗ್ತೀನಿ. ಮುಂದಿನ ಬಾರಿ ಕರ್ನಾಟಕಕ್ಕೆ ಬಂದಾಗ ಸಿಎಂ,ಡಿಸಿಎಂ ಭೇಟಿ ಮಾಡ್ತೀನಿ ಎಂದಿದ್ದೆ ಎಂದು ಹೇಳಿದ್ದಾರೆ.

Related Articles

- Advertisement -spot_img

Latest Articles