Thursday, June 8, 2023
spot_img
- Advertisement -spot_img

ಬಿಡದಿಯಿಂದ ಮದ್ದೂರಿನವರೆಗೆ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ಮಾ.11 ರಂದು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾರ್ಚ್​​ 11ರಂದು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆ ಶಾಸಕ ಅಭಯ ಪಾಟೀಲ್ ಪಕ್ಷದ ಬಾವುಟ, ಬಂಟಿಂಗ್ಸ್ ಕಟ್ಟಿ ಸಿದ್ಧತೆ ಕೈಗೊಂಡಿದ್ದಾರೆ.

ಮಾರ್ಚ್ 11 ರಂದು ಬಿಡದಿಯಿಂದ ಮದ್ದೂರಿನವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಬೃಹತ್ ಸಮಾವೇಶಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಆಗಮಿಸಲಿರುವ ಮೋದಿ, ನೂತನವಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಉದ್ಘಾಟಿಸಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಬಿಜೆಪಿ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ರೋಡ್ ಶೋ ಮಾರ್ಗದಲ್ಲಿ 10 ಸಾವಿರ ಧ್ವಜ ಕಟ್ಟಿದ್ದಾರೆ.

ಸುಮಾರು 8 ಸಾವಿರ ಕೋಟಿಗೂ ಅಧಿಕ ವೆಚ್ಚ​ದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಮದ್ದೂ​ರಿ​ನಲ್ಲಿ ಲೋಕಾ​ರ್ಪಣೆ ಮಾಡ​ಲಿ​ದ್ದಾ​ರೆ. ಇದು ರಾಜ್ಯದ ಮೊದಲ ಎಕ್ಸ್‌ಪ್ರೆಸ್‌ ಹೆದ್ದಾರಿಯಾಗಿದೆ. ದಶ​ಪಥ ರಸ್ತೆ ಉದ್ಘಾ​ಟ​ನೆ​ಗೆಂದೇ ಗೆಜ್ಜ​ಲ​ಗೆ​ರೆ ಬಳಿ 120 ಎಕ್ರೆ ವಿಶಾಲ ಮೈದಾ​ನ​ದಲ್ಲಿ ಬೃಹತ್‌ ಸಮಾ​ವೇಶ ನಡೆ​ಯ​ಲಿ​ದ್ದು, 2 ಲಕ್ಷ ಮಂದಿ ಪಾಲ್ಗೊ​ಳ್ಳುವ ನಿರೀಕ್ಷೆ ಇದೆ.

Related Articles

- Advertisement -spot_img

Latest Articles