Tuesday, November 28, 2023
spot_img
- Advertisement -spot_img

ಡಾ. ಜಿ. ಪರಮೇಶ್ವರ್ ವಿರುದ್ಧ ಅವಹೇಳನ : ಪೊಲೀಸರಿಂದ ತನಿಖೆ ಶುರು

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಅವರ ಮಗಳ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದವರ ವಿರುದ್ಧ ಮೊನ್ನೆ ಯಷ್ಟೇ ದೂರು ನೀಡಲಾಗಿತ್ತು. ಆಪ್ತ ಸೋಮಶೇಖರ್ ಎಂಬುವರು ಅವಹೇಳನಕಾರಿ ವಿಡಿಯೋ ಮಾಡಿದ್ದವರ ವಿರುದ್ಧ ನೀಡಿದ್ದರು.

ಇದೀಗ ಪ್ರಕರಣ‌ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೆನ್ ಪೊಲೀಸರು‌ ತನಿಖೆ ಚುರುಕುಗೊಳಿಸಿದ್ದಾರೆ‌. ಜೊತೆಗೆ ಸಂಬಂಧಪಟ್ಟ ಯೂಟ್ಯೂಬ್ ಚಾನಲ್‌ ಮಾಲೀಕರಿಗೆ ನೋಟಿಸ್ ಜಾರಿ‌ ಮಾಡಿದ್ದಾರೆ. ಫೇಸ್ಬುಕ್ ಮತ್ತು ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ವಿಡಿಯೋ ಅಪ್ಲೋಡ್ ಮಾಡಿ ಅವಹೇಳನ ಮಾಡಲಾಗಿದೆ. ರಾಜಕೀಯವಾಗಿ ಅವರನ್ನು ತಗ್ಗಿಸಲು ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡಿದ್ದಾರೆ. ಅಲ್ಲದೆ ಪರಮೇಶ್ವರ್ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ‌ ಎಂದು ದೂರು ನೀಡಲಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಬರವಣಿಗೆ ವಿರುದ್ಧ ಪರಮೇಶ್ವರ್ ಕಿಡಿಕಾರಿದ್ದರು. ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ನಕಲಿ ಖಾತೆ ತೆರೆದು ವಿಡಿಯೋ ಅಪ್ಲೋಡ್ ಮಾಡಿ ಅವಹೇಳನ ಮಾಡಲಾಗಿತ್ತು. ಈ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

Related Articles

- Advertisement -spot_img

Latest Articles