ಚೆನ್ನೈ: ಬಹುಭಾಷಾ ನಟಿ ವಿಜಯಲಕ್ಷ್ಮಿಗೆ ವಂಚನೆ ಹಾಗೂ ಕಿರುಕುಳ ನೀಡಿದ ಆರೋಪದಡಿ ಎನ್‌ಟಿಕೆ ಪಕ್ಷದ ಮುಖ್ಯಸ್ಥರಿಗೆ ಪೊಲೀಸರು ಸಮನ್ಸ ಜಾರಿ ಮಾಡಿದ್ದಾರೆ. ನಾಮ್ ತಮಿಜರ್ ಕಚ್ಚಿ ಮುಖ್ಯಸ್ಥ ಎಸ್ ಸೀಮನ್ ವಿರುದ್ಧ ತಮಿಳುನಾಡು ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಈ ಸಂಬಂಧ ಶನಿವಾರವೇ ಪೊಲೀಸರ ಎದುರು ಹಾಜರಾಗಿ ಈ ಬಗ್ಗೆ ಹೇಳಿಕೆ ನೀಡುವಂತೆ ಸಮನ್ಸ್‌ನಲ್ಲಿ ಕೇಳಲಾಗಿತ್ತು. ಆದರೆ ಪೂರ್ವ ನಿಗದಿತ ಕಾರ್ಯಕ್ರಮಗಳ ಹಿನ್ನೆಲೆ ಸೆ.12ರಂದು ಹಾಜರಾಗುವುದಾಗಿ ಸೀಮನ್ ಸಮನ್ಸ್‌ಗೆ ಉತ್ತರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ರವಾದಿ ಮುಹಮ್ಮದ್ ‘ಮರ್ಯಾದಾ ಪುರುಷೋತ್ತಮ’; ಬಿಹಾರ ಶಿಕ್ಷಣ ಸಚಿವ
ನಟಿ ವಿಜಯಲಕ್ಷ್ಮಿ ಅವರು ಸೀಮನ್ ವಿರುದ್ಧ ಕಳೆದ ಕೆಲವು ವರ್ಷಗಳಿಂದ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳನ್ನು ಮಾಡುತ್ತಿದ್ದಾರೆ. ಕಳೆದ ವಾರ ಪೊಲೀಸರಿಗೆ ಹೊಸ ದೂರು ನೀಡಿದ್ದು, ಸೀಮನ್ ತನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾನೆ ಮತ್ತು ಲೈಂಗಿಕ ಸಂಬಂಧ ಹೊಂದಿದ ನಂತರ ತನಗೆ ಮೋಸ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಘಟನೆ ಸಂಬಂಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC)ಯ ಸೆಕ್ಷನ್ 164ರ ಅಡಿಯಲ್ಲಿ ತಿರುವಳ್ಳೂರು ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮುಂದೆ ವಿಜಯಲಕ್ಷ್ಮಿ ತಮ್ಮ ಹೇಳಿಕೆ ದಾಖಲಿಸಿದ್ದು, ಇದಾದ ನಂತರ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ: G20 Budget : ಜಿ20 ಶೃಂಗಸಭೆಯ ಖರ್ಚು ಎಷ್ಟು ಸಾವಿರ ಕೋಟಿ ಗೊತ್ತಾ?
ಈ ಹೇಳಿಕೆಗೆ ಸಂಬಂಧಪಟ್ಟಂತೆ ನಟಿ ವಿಜಯಲಕ್ಷ್ಮಿ ಅವರನ್ನು ಪೊಲೀಸರು ಬರೋಬ್ಬರು 6 ಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ್ದರು. ಇದೀಗ ಸೀಮನ್ ಅವರಿಂದ ಹೇಳಿಕೆ ಪಡೆಯಬೇಕಿತ್ತು ಅದಕ್ಕಾಗಿ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.