Tuesday, November 28, 2023
spot_img
- Advertisement -spot_img

ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರ ಆಯ್ಕೆ ಮಾಡುವ ಅಭ್ಯಾಸ ಹೊಂದಿವೆ; ಖರ್ಗೆ ಹೇಳಿಕೆಗೆ ಸೀತಾರಾಮನ್ ಸಿಡಿಮಿಡಿ

ನವದೆಹಲಿ: ರಾಜಕೀಯ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಹೊಂದಿದ್ದು, ಅವರು ವಿದ್ಯಾವಂತ ಮತ್ತು ಹೋರಾಟ ಮಾಡುವವರನ್ನು ಆಯ್ಕೆ ಮಾಡುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಸಂಬಂಧ ಭಾಷಣ ಮಾಡಿದ ಅವರು, ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಕೇಂದ್ರವು ಮಂಡಿಸಿದೆ. ಇದನ್ನು ಸ್ವಾಗತ ಮಾಡುತ್ತೇನೆ. ಆದರೆ 2010ರಲ್ಲಿಯೇ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದನ್ನು ಅವರ ಗಮನಕ್ಕೆ ತರಲು ಇಚ್ಛಿಸುತ್ತೇವೆ ಎಂದರು.

ಇದನ್ನೂ ಓದಿ: 2027ರ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿ; ಇಷ್ಟು ತಡವಾಗೋದು ಯಾಕೆ?

ಈ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ‘ನಾವು ವಿರೋಧ ಪಕ್ಷದ ನಾಯಕರನ್ನು ಗೌರವಿಸುತ್ತೇವೆ ಆದರೆ ಎಲ್ಲಾ ಪಕ್ಷಗಳು ದುರ್ಬಲ ಮಹಿಳೆಯರನ್ನು ಆಯ್ಕೆ ಮಾಡುತ್ತವೆ ಎಂಬ ಹೇಳಿಕೆ ಒಪ್ಪುವಂತಹದಲ್ಲ. ನಮಗೆಲ್ಲರಿಗೂ ನಮ್ಮ ಪಕ್ಷ, ಪ್ರಧಾನಿ ಅಧಿಕಾರ ನೀಡಿದ್ದಾರೆ. ಅಧ್ಯಕ್ಷೆ ದ್ರೌಪದಿ ಮುರ್ಮು ಸಶಕ್ತ ಮಹಿಳೆ’ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌; ಕಿರಿಯ ಸಹಪಾಠಿಗಳಿಗೆ ದೇವೇಗೌಡರಿಂದ ಕಿವಿಮಾತು..

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಬಳಿಕ ಕ್ರೆಡಿಟ್ ವಾರ್ ಸಹ ಆರಂಭವಾಗಿದೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಮೀಸಲಾತಿ ಕ್ರೆಡಿಟ್ ಕಾಂಗ್ರೆಸ್​ ಪಕ್ಷಕ್ಕೆ ಸಲ್ಲುತ್ತದೆ ಎಂದಿದ್ದಾರೆ. ನಾವು ಮಂಡಿಸಿದ ಬಿಲ್ ಅನ್ನು ಈಗ ಮಂಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷಗಳ ಬಳಿಕ ಅವರಿಗೆ ಮೀಸಲಾತಿ ಬಿಲ್ ನೆನಪಾಗಿದೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles