ಚಿಕ್ಕಳ್ಳಾಪುರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನ ತಂದೆ-ತಾಯಿ ಇದ್ದಂತೆ ಎಂದು ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನಾನು ಗೆದ್ದಿದ್ದಕ್ಕೆ ಡಿ.ಕೆ.ಶಿವಕುಮಾರ್ ನನ್ನನ್ನು ಅಭಿನಂದಿಸಿ ಆಶೀರ್ವಾದ ಮಾಡಿದರು. ಕೆ.ಸಿ.ವೇಣುಗೋಪಾಲ್ ತಬ್ಬಿಕೊಂಡು ಸಂತೋಷ ಹಂಚಿಕೊಂಡರು.ಇನ್ನೂ ಸುಧಾಕರ್ ಸೋಲಿಸಿದ್ದಕ್ಕೆ ಸಿದ್ದರಾಮಯ್ಯ ಹಾಲು ಕುಡಿದಷ್ಟು ಖುಷಿಪಟ್ಟರು ಎಂದು ಸಂತಸ ಹಂಚಿಕೊಂಡರು.
ಸುಧಾಕರ್ ವಿರುದ್ಧ ಗೆದ್ದಿದ್ದಕ್ಕೆ ನನ್ನನ್ನು ಸೆಲೆಬ್ರಿಟಿ ರೀತಿ ನೋಡುತ್ತಿದ್ದಾರೆ. ಜನರ ಪ್ರೀತಿ ಅಭಿಮಾನ ವಿಶ್ವಾಸಕ್ಕೆ ಚಿರಋಣಿ. ನಾನು ನಿರಂತರವಾಗಿ ಕ್ಷೇತ್ರದ ಜನರ ಜೊತೆ ಇರಲು ಬಯಸುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಕಷ್ಟ, ಸುಖದಲ್ಲಿ ಭಾಗಿಯಾಗುತ್ತೇನೆ ಎಂದರು.
ಅಂದಹಾಗೆ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ತಮ್ಮ ಮಾತಿನಿಂದ ಜನಮನ ಸೆಳೆದಿದ್ದು, ಕಡುಬಡತನದಿಂದ ಮೇಲೆ ಬಂದ ನಾನು ಬಡವರ ಪರ ಕೆಲಸ ಮಾಡುತ್ತೇನೆ, ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡು ನನ್ನ ಬಳಿ ಬರಬಾರದು ನಾನೇ ಅವರ ಬಳಿಗೆ ಹೋಗುತ್ತೇನೆ ಎಂದು ತಿಳಿಸಿದರು.