ಬೆಂಗಳೂರು : ಚಂದ್ರ ಮೇಲ್ಮೈನಲ್ಲಿ ತನ್ನ ಕೆಲಸ ಮುಗಿಸಿರುವ ಚಂದ್ರಯಾನ-3ರ ಪ್ರಗ್ಯಾನ್ ರೋವರ್ ಮತ್ತು ವಿಕ್ರಂ ಲ್ಯಾಂಡರ್ ನಿದ್ರೆಗೆ ಜಾರಿದೆ (ಸ್ಲೀಪ್ ಮೂಡ್) ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಚಂದ್ರನ ಮೇಲೆ ಸುಮಾರು 100 ಮೀಟರ್ ಗಳಷ್ಟು ದೂರ ಸಂಚರಿಸಿರುವ ಪ್ರಗ್ಯಾನ್ ರೋವರ್, ತನಗೆ ವಹಿಸಿದ್ದ ಕೆಲಸ ಪೂರ್ಣಗೊಳಿಸಿದೆ. ರೋವರನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಿ ಸ್ಲೀಪ್ ಮೋಡ್‌ಗೆ ಹೊಂದಿಸಲಾಗಿದೆ. ರೋವರ್ ನ APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಈ ಪೇಲೋಡ್‌ಗಳಿಂದ ದತ್ತಾಂಶವು ಲ್ಯಾಂಡರ್ ಮೂಲಕ ಭೂಮಿಗೆ ರವಾನೆಯಾಗುತ್ತದೆ ಎಂದು ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಇದನ್ನೂ ಓದಿ : ರಾಹುಲ್‌ಗಾಗಿ ಸ್ಪೆಷಲ್ ʼಮಟನ್ʼ ರೆಸಿಪಿ ಮಾಡಿದ ಲಾಲು!
ಪ್ರಸ್ತುತ ಪ್ರಗ್ಯಾನ್ ರೋವರ್ ನ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ. ಆದರ ಸೌರ ಫಲಕಗಳು ಚಂದ್ರನ ಮೇಲೆ ಮುಂದಿನ ಸೂರ್ಯೋದಯ (ಸೆಪ್ಟೆಂಬರ್ 22, 2023) ದಂದು ಬೆಳಕನ್ನು ಸ್ವೀಕರಿಸಲು ಸಿದ್ಧವಾಗಿದೆ. ಮುಂದಿನ ಸೂರ್ಯೋದದ ಬಳಿಕ ರೋವರ್ ಮತ್ತೊಂದು ಕಾರ್ಯಾಚರಣೆ ನಡೆಸಿ ಭೂಮಿಗೆ ಮಾಹಿತಿ ರವಾನಿಸಬಹುದು ಅಥವಾ ಚಂದ್ರನ ಮೇಲೆ ಭಾರತ ಶಾಶ್ವತ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಇಸ್ರೋ ಹೇಳಿದೆ.
ಆಗಸ್ಟ್ 23, 2023ರಂದು ಚಂದ್ರಯಾನ-3 ಯೋಜನೆಯ ಮೂಲಕ ಇಸ್ರೋ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿ ಐತಿಹಾಸಿಕ ಸಾಧನೆ ಮಾಡಿದೆ. ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸೇಫ್ ಲ್ಯಾಂಡಿಂಗ್ ಆದ ಬಳಿಕ, ಅದರ ಒಳಗಡೆಯಿಂದ ಹೊರ ಬಂದ ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಓಡಾಡಿ ಭೂಮಿಗೆ ಮಾಹಿತಿ ರವಾನಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.