ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲಾದ ಬಳಿಕ ಮೊದಲ ಫೋಟೋವನ್ನು ಲ್ಯಾಂಡರ್ ಕಳುಹಿಸಿತ್ತು.
ಇದೀಗ ವಿಕ್ರಮ್ ಲ್ಯಾಂಡರ್‌ನಿಂದ ಪ್ರಗ್ಯಾನ್ ರೋವರ್ ಅನ್ನು ಯಶಸ್ವಿಯಾಗಿ ಹೊರ ತರಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅನ್ವೇಷಣೆಗಾಗಿ ಪ್ರಗ್ಯಾನ್ ರೋವರ್ ಲ್ಯಾಂಡರ್‌ನಿಂದ ಹೊರಬಂದಿದೆ. ಲ್ಯಾಂಡರ್‌ನಿಂದ ಹೊರಬಂದಿರುವ ರೋವರ್‌ನ ಫೋಟೋ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ʼಇಸ್ರೋʼಗೆ ವಿಶ್ ಮಾಡಲು ನಮ್ಮ ಬೆಂಗಳೂರಿಗೆ ಬರ್ತಿದ್ದಾರೆ ಮೋದಿ
14 ದಿನ ಚಂದ್ರನಲ್ಲಿ ಅನ್ವೇಷಣೆ
ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಲ್ಯಾಂಡರ್ 14 ದಿನ ಕೆಲಸ ಮಾಡಬೇಕಿದೆ. ಲ್ಯಾಂಡರ್‌ನಲ್ಲಿ ಅಳವಡಿಸಲಾದ ಸೋಲಾರ್ ಪ್ಯಾನಲ್‌ನಿಂದ ವಿದ್ಯುತ್ ಬಳಸಿಕೊಂಡು ಅದು ಕಾರ್ಯನಿರ್ವಹಿಸಲಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ 14 ದಿನ ಸೂರ್ಯನ ಬೆಳಕು ಬೀಳಲಿದೆ, ಈ ದಿನದಲ್ಲಿ ಮಾತ್ರ ರೋವರ್ ಕಾರ್ಯ ನಿರ್ವಹಿಸಲಿದೆ. ಕತ್ತಲಾದ ಸಂದರ್ಭದಲ್ಲಿ ತಾಪಮಾನ ತೀವ್ರ ಕುಸಿತ ಉಂಟಾಗಲಿದೆ. ಇದರಿಂದ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಕೆಲಸ ಮಾಡುವುದಿಲ್ಲ. ಹೀಗಾಗಿ 14 ದಿನಗಳಲ್ಲೇ ಅಧ್ಯಯನವನ್ನ ಮುಗಿಸಬೇಕಾಗುತ್ತದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.