ನವದೆಹಲಿ: ಚಂದ್ರಯಾನ್ ಮಿಷನ್‌ನಲ್ಲಿ ಚಂದ್ರನ ಮೇಲ್ಮೈ ತಲುಪಿರುವ ಪ್ರಗ್ಯಾನ್ ರೋವರ್ ಮಹತ್ವದ ಮಾಹಿತಿ ರವಾನಿಸಿದೆ. ಚಂದ್ರನ ದಕ್ಷಿಣ ಧ್ರುವದ ಬಳಿ ಸಲ್ಫರ್ ಪತ್ತೆ ಮಾಡಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್‌ಐಬಿಎಸ್) ಉಪಕರಣವು ದಕ್ಷಿಣದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (ಎಸ್) ಇರುವಿಕೆಯನ್ನು ಖಚಿತಪಡಿಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ. ಇದರ ಜೊತೆ ದಕ್ಷಿಣ ಧ್ರುವದಲ್ಲಿ ಜಲಜನಕದ ಹುಡುಕಾಟ ನಡೆಯುತ್ತಿದೆ. ಪ್ರಗ್ಯಾನ್ ರೋವರ್ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಫೆರಸ್, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಇದನ್ನೂ ಓದಿ: ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಭೂಭಾಗ ನನ್ನದು ಎಂದ ಚೀನಾ!
LIBS ಒಂದು ವೈಜ್ಞಾನಿಕ ತಂತ್ರಾಂಶವಾಗಿದ್ದು, ಖನಿಜಗಳ ಸಂಯೋಜನೆಯನ್ನು ತೀವ್ರವಾದ ಲೇಸರ್ ಪಲ್ಸ್‌ನ ಸಹಾಯದಿಂದ ಗುರುತಿಸಲಿದೆ. ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿನ ಮಣ್ಣಿನ ತಾಪಮಾನವನ್ನು ವಿವರಿಸಿರುವ ನಂತರ ಸಲ್ಫರ್ ಇರುವಿಕೆಯನ್ನು ದೃಢಪಡಿಸಿದೆ. ಚಂದ್ರನ ಮೇಲೆ ರೋವರ್ ಇನ್ನೂ 7 ದಿನಗಳ ವರೆಗೆ ಕಾರ್ಯನಿರ್ವಹಿಸಲಿದೆ. ಈ ವೇಳೆ ಇನ್ನಷ್ಟು ಮಹತ್ವದ ಮಾಹಿತಿ ಭೂಮಿಗೆ ಕಳುಹಿಸುವ ಸಂಭವವಿದೆ. ಚಂದ್ರನ ಮೇಲಿರುವ ಧೂಳು ಮತ್ತು ಕಲ್ಲಿನ ರಾಸಾಯನಿಕ ಸಂಯೋಜನೆಯ ತನಿಖೆಗೆ ಒಳಪಡಿಸುವುದು ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.