Sunday, September 24, 2023
spot_img
- Advertisement -spot_img

ʼಸನಾತನ ಧರ್ಮದ ಟೀಕೆ ಖಂಡಿಸೋದು ಬಿಟ್ಟು ಮೋದಿ ಬಗ್ಗೆ ಟ್ವೀಟ್‌ ಮಾಡ್ತೀರಾʼ

ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಸನಾತನ ಧರ್ಮದ ಅವಹೇಳನ ಹೇಳಿಕೆ ಮಾಡಿದ್ದನ್ನು ಖಂಡಿಸೋದು ಬಿಟ್ಟು ಪ್ರಧಾನಿ ಮೋದಿ ಅವರ ಕುರಿತು ಟ್ವೀಟ್ ಮಾಡ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಆಕ್ರೋಶಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ದೇಶದ ವಿವಿಧೆಡೆ ಸನಾತನ ಧರ್ಮದ ಅವಹೇಳನ ಮಾಡಲಾಗ್ತಿದೆ, ಪ್ರಧಾನಿ ಮೋದಿ ಏನು ಹೇಳಿಕೆ ಕೊಟ್ಟಿದ್ದಾರೆ ಅಂತ ಇವ್ರು ನೋಡಿದ್ದಾರಾ..? ಸಿದ್ದರಾಮಯ್ಯ ನವರೇ ಏನು ಮಾತನಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ರಾಜ್ಯದ ಬ್ಯಾಂಕುಗಳಲ್ಲಿ ಕನ್ನಡ ಕಡ್ಡಾಯ; ಸರ್ಕಾರದಿಂದ ಶೀಘ್ರ ಅಧಿಸೂಚನೆ!

ನೀವು ತುಷ್ಟೀಕರಣದಿಂದ ರಾಜ್ಯದಲ್ಲಿ ಗೆದ್ದಿರಬಹುದು ಆದರೆ ನೀವು ದೇಶದ ಲೋಕಸಭೆಯಲ್ಲಿ ಕಳೆದ ಹತ್ತು ವರ್ಷಗಳಿಂದ ವಿರೋಧ ಪಕ್ಷದವರಾಗಿಲ್ಲ, ಕಾಂಗ್ರೆಸ್‌ನ ಮುತ್ತಜ್ಜ, ಅಜ್ಜ, ಮಗ ಇವರೇ ಆಡಳಿತ ನಡೆಸಿದ್ದರು ಇವರ ಕೈಯಲ್ಲಿ ಸರ್ವಸ್ವ ಇತ್ತು, ಆದರೆ ವಿಪಕ್ಷ ನಾಯಕ ಸ್ಥಾನ ಕಳೆದುಕೊಂಡಿದ್ದೀರಿ, ನಾನು ಕೂಡ ಆ ಸಭೆಯಲ್ಲಿ ಇದ್ದೆ ಮೋದಿಯವರು ಆ ರೀತಿಯಾಗಿ ಹೇಳಿಲ್ಲ, ಅಕಸ್ಮಾತ್ ಹೇಳಿದ್ರೂ ಏನ್ ತಪ್ಪು?‌ ಎಂದು ಪ್ರಶ್ನಿಸಿದರು.

ಎ ರಾಜಾ ಮತ್ತು ಉದಯ್ ನಿಧಿ ಹೇಳಿಕೆ ಖಂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಇನ್ನೂ ಮಾಡ್ತಿಲ್ಲ, ಘಟಬಂಧನ ಪ್ರಚಾರ ಬಹಳಷ್ಟು ನಡೆಯುತ್ತಿದೆ, ದೆಹಲಿಯಲ್ಲಿ ಸಭೆ ಇದೆ, ಆದರೆ ಇದು ಅರ್ಥವಿಲ್ಲದ ಘಟಬಂಧನ, ವೋಟ್ ಬ್ಯಾಂಕ್ ರಾಜಕೀಯಕ್ಕೆ ಕಮ್ಯುನಿಸ್ಟ್ ವಿರುದ್ಧ ಕಾಂಗ್ರೆಸ್ ಸಾಕಷ್ಟು ಕಡೆ ಸ್ಪರ್ಧೆ ಮಾಡಿದೆ, ಇದು ತುಷ್ಟಿಕರಣದ ಘಟಬಂಧನ, ಇದರಿಂದ ದೇಶ ಸನಾತನ ಧರ್ಮ, ಸಂಸ್ಕೃತಿಗಳ ಹಿಯಾಳಿಸುವ ಕೆಲಸವಾಗಿದೆ, ಕೇವಲ ವೋಟ್‌ಗಾಗಿ‌ ಹಿಂದೂ ಧರ್ಮವನ್ನು ಹಿಯಾಳಿಸಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗಿ ಪೂಜೆ‌ ಮಾಡಿಸಿ ಡ್ರಾಮಾ ಮಾಡುತ್ತಾರೆ, ಸ್ವತಃ ಉದಯ್ ಸ್ಟಾಲಿನ್ ದೈವ ಭಕ್ತ, ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರ ಮೈತ್ರಿ ಬಗ್ಗೆ ನನಗೇನು ಗೊತ್ತಿಲ್ಲ , ಈ ವಿಷಯದಲ್ಲಿ ಅಧಿಕೃತ ಮಾಹಿತಿ ಬರೋವರಿಗೂ ಏನು ಹೇಳುವುದಿಲ್ಲ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles