ಚಿತ್ರದುರ್ಗ: ಭಾರತೀಯ ಜನತಾ ಪಾರ್ಟಿ ಒಂದು ಸುಸಂಸ್ಕೃತವಾದ ಪಕ್ಷವಾಗಿದೆ. ಹಾಗಾಗೀ ಕಾಂಗ್ರೆಸ್ ಪಕ್ಷದವರು ತಮ್ಮ ಹಿನ್ನೆಲೆ ಮತ್ತು ಪೂರ್ವಾಶ್ರಮ ನೋಡಿಕೊಂಡು ಮಾತನಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಯಾರ್‍ಯಾರ ಶಿಷ್ಯಂದಿರು ಆಗಿದ್ದರು. ಯಾರ್‍ಯಾರಿಗೆ ಚಹಾ ಕೊಡುತ್ತಿದ್ದರು ಮೊದಲು ತಿಳಿದುಕೊಳ್ಳಬೇಕು ಹಾಗೂ ನೆನಪು ಇಟ್ಟುಕೊಂಡು ಮಾತನಾಡಬೇಕು.
ನಾನು ಮಾಧ್ಯಮಗಳಲ್ಲಿ ಗಮನಿಸಿದೆ ಹಾಗೆ ಅಮಿತ್ ಶಾ ಅವರಿಗೆ ಮಲ್ಲಿಕಾರ್ಜುನ್ ಖರ್ಗೆ ಅವರು ನಿವೇನು ಮೇಸ್ತ್ರಿನಾ ಎಂದು ಪ್ರಶ್ನೆ ಮಾಡಿದ್ದಾರೆ, ಹಿಂದೂಗಳು ಕಂಡರೆ ಮತ್ತು ರಾಮ ಮಂದಿರದ ಬಗ್ಗೆ ಯಾಕೆ ನಿಮಗೆ ಹೊಟ್ಟೆ ಕಿಚ್ಚು, ಸಿಟ್ಟು ಮೊದಲು ಇದನ್ನು ಸ್ಪಷ್ಟ ಪಡಿಸಬೇಕು ಎಂದು ಕಿಡಿಕಾರಿದರು.
ಬೇರೆ ಬೇರೆ ಪಕ್ಷಗಳ ಹಾಗೆ ಕಾಂಗ್ರೆಸ್ ಕೂಡ ಒಂದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ, ಕಾಂಗ್ರೆಸ್ ಪಕ್ಷದವರು ಎಲ್ಲಾ ಕಡೆ ನೆಹರು, ಇಂದಿರಾ ಗಾಂಧಿ ಕುಟುಂಬದ ಹೆಸರನ್ನು ಇಡಲಾಗಿದೆ, ಆದರೆ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್, ಅಂಬೇಡ್ಕರ್, ಸುಭಾಶ್ಚಂದ್ರ ಬೋಸ್ ಅವರ ಹೆಸರು ಇಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ಸಿಎಂ ಒಂದು ಒಳ್ಳೆ ಹೆಜ್ಜೆ ಇಟ್ಟಿದ್ದಾರೆ ಸಮಯಾವಕಾಶ ಕೊಡಬೇಕು, ಕರ್ನಾಟಕದ ಹಿತ ಕಾಪಾಡುವ ಕೆಲಸವನ್ನು ಮಾಡಿದ್ದೇವೆ, ಕಳಸಾ ಬಂಡೂರಿ ಹಾಗು ಭದ್ರಾ ಯೋಜನೆ ಸೇರಿ ಎಲ್ಲ ಕಡೆ ನಿಂತಿದ್ದೇವೆ ಎಂದಿದ್ದಾರೆ.