ತುಮಕೂರು: ಪ್ರಜಾಧ್ವನಿ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷದ ಯಾತ್ರೆ ಅಲ್ಲ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ತುಮಕೂರಿನಲ್ಲಿ ನಡೆದ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ಇದು ಕರ್ನಾಟಕದಲ್ಲಿ ಹೊಸ ಬದಲಾವಣೆ ತರುವ ಸಲುವಾಗಿ ರೂಪುಗೊಂಡಿರುವ ಯಾತ್ರೆ, ರಾಜ್ಯದಲ್ಲಿ ಈ ಯಾತ್ರೆಯ ಮೂಲಕ ನಾವು ಹಲವು ಗ್ಯಾರಂಟಿಗಳನ್ನ ಹೊತ್ತು ತಂದಿದ್ದೇವೆ. ಅದರಲ್ಲಿ ಈಗಾಗಲೇ ಎರಡು ಗ್ಯಾರಂಟಿ ಘೋಷಣೆ ಮಾಡಲಾಗಿದೆ ಎಂದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮನೆಯ ಬಜೆಟ್ ನ್ನು ಹಾಳು ಮಾಡಿಬಿಟ್ಟಿದೆ. ಮೋದಿ ಹಾಲಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಪನ್ನೀರ್ ಮೇಲೂ ಜಿಎಸ್ಟಿ ಹಾಕಿದ್ದಾರೆ ಎಂದರು. ಯಾತ್ರೆ ಮೂಲಕ ಕಾಂಗ್ರೆಸ್ ಹೊತ್ತು ತಂದ ಗ್ಯಾರಂಟಿಗಳ ಪೈಕಿ ಒಂದು ಮಹಿಳೆಯರಿಗೆ 2000 ರೂಪಾಯಿ ನೀಡುವುದು ಮತ್ತು 2000 ಯುನಿಟ್ ಉಚಿತ ವಿದ್ಯುತ್ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ.
ನಮ್ಮ ಘೋಷಣೆಗಳನ್ನು ಕೇಳಿ ಇದಕ್ಕೆಲ್ಲ ನಿಮಗೆ ಹಣ ಎಲ್ಲಿ ಬರುತ್ತೆ ಅಂತಾ ಬಿಜೆಪಿ ನಾಯಕರು ಪದೇ ಪದೇ ಕೇಳುತ್ತಿದ್ದಾರೆ. ಈಗಿನ ಬಜೆಟ್ ಒಂದೂವರೆ ಲಕ್ಷ ಕೋಟಿ. ಮುಂದಿನ ದಿನಗಳಲ್ಲಿ ಇದು 2 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಇದರಲ್ಲಿ ನೀವೇನು 40 ಪರ್ಸೆಂಟ್ ಕಮಿಷನ್ ಒಳಗೊಂಡಿದೆ ಎಂದು ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವ ಎಲ್ಲ ಅರ್ಹತೆ ಕಳೆದುಕೊಂಡಿದೆ ಎಂದು ಹರಿಹಾಯ್ದಿದ್ದಾರೆ.