ಹಾಸನ: ಟಿಕೆಟ್ ಹಂಚಿಕೆಯಲ್ಲಿ ಗೊಂದಲವಿಲ್ಲ, ಎಲ್ಲಾ ಸಮಸ್ಯೆ ಬಗೆಹರಿದ ಮೇಲೆ ಜೆಡಿಎಸ್ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಾಗುವುದು. ನಂತರ ಒಂದೊಳ್ಳೆ ದಿನ ನೋಡಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಮ್ಮ ಕಾರ್ಯಕರ್ತರನ್ನು ಉಳಿಸಬೇಕು ಅಂದರೆ ನಮ್ಮ ಅಭ್ಯರ್ಥಿ ಹಾಕಲೇ ಬೇಕು, ಕ್ಷೇತ್ರ ಹಾಗೇ ಬಿಡಲು ಸಾಧ್ಯವಿಲ್ಲ. ಹೀಗಾಗಿ ಅರಸೀಕೆರೆ ಟಿಕೆಟ್ ವಿಚಾರವಾಗಿ ಫೆಬ್ರವರಿ 12ರಂದು ಸಭೆ ಕರೆದಿದ್ದೇವೆ. ಶಾಸಕ ಶಿವಲಿಂಗೇಗೌಡಗೆ ಮೊನ್ನೆ ದಿಶಾ ಸಭೆಯಲ್ಲೂ ಹೇಳಿದ್ದೇವೆ. ಕಾಲ ಮಿಂಚಿಹೋಗುವ ಮುನ್ನ ನಿರ್ಧಾರ ಮಾಡಿ ಎಂದಿದ್ದೇವೆ.
ಫೆ.12ರೊಳಗೆ ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಇಲ್ಲವಾದರೆ ನಮ್ಮ ಪಾರ್ಟಿಯಿಂದ ಏನು ಮಾಡಬೇಕೊ ಅದನ್ನ ಮಾಡುತ್ತೇವೆ ಎಂದರು. ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ಅವರಿಗೆ ಟಿಕೆಟ್ ಸಿಗುತ್ತದೆಯೇ ಎಂಬ ಕೌತುಕ ಕ್ಷೇತ್ರದ ಜನರಲ್ಲಿದೆನಾವಿನ್ನು ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಎಲ್ಲಾ ಭಾಗದ ಕಾರ್ಯಕರ್ತರ ಸಭೆಯನ್ನು ಕರೆದು ಚರ್ಚೆ ಮಾಡುತ್ತೇವೆ.
ಸಭೆಯಲ್ಲಿ ಬರುವ ಅಭಿಪ್ರಾಯ ಪಡೆದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾರಿಗೆ ಟಿಕೆಟ್ ಕೊಡಲಾಗುವುದು ಎಂದು ಘೋಷಣೆ ಮಾಡಲಾಗುತ್ತದೆ ಎಂದರು.