Sunday, October 1, 2023
spot_img
- Advertisement -spot_img

ಉಚಿತ ‘ಗ್ಯಾರಂಟಿ’ಗಳಿಂದ ತೊಂದರೆ ಆಗದಿರಲಿ – ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ತೊಂದರೆ ಆಗಿದೆ. ಕೆಎಸ್ ಆರ್ ಟಿಸಿಗೆ ಕೂಡ ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ ಮಾಡಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಚಾಲಕರಿಗೆ ತೊಂದರೆ ಆಗಿರೋದು ನಿಜ. ರಾಜ್ಯದಲ್ಲಿ ಬಡ ಜನ ಇರೋದ್ರಿಂದ ಸರ್ಕಾರ ಇದರ ಬಗ್ಗೆ ಕೂಡಲೇ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ. ಸದ್ಯ ಕೆಎಸ್ ಆರ್ ಟಿಸಿ ಕೂಡ ಲಾಸ್ ನಲ್ಲಿ ನಡೆಯುತಿದೆ. ಉಚಿತ ಯೋಜನೆಗಳು ಸಿಗ್ತಾ ಇದೆ ಅಂತ ಮನ ಬಂದಂತೆ ನಡೆದುಕೊಳ್ತಾ ಇದ್ದಾರೆ. ಇದರಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ : ಊಬರ್‌, ಆಟೋ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ : ಡಿಕೆಶಿ ಕಿಡಿ

ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು, ಮೈತ್ರಿ ಇನ್ನೂ ಫೈನಲ್ ಆಗಿಲ್ಲ, ಅದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲಾ, ಮೈತ್ರಿ ಅನಿವಾರ್ಯ ಅಂತ ಬೊಮ್ಮಯಿ ಅವರು ಸ್ಥಳೀಯವಾಗಿ ಹೇಳಿರಬಹುದು. ನಾನು ಕೇಂದ್ರದಲ್ಲಿ ಮಂತ್ರಿಯಾಗಿರುವುದರಿಂದ ನಮ್ಮ ಪಕ್ಷದ ವರಿಷ್ಠರು ಮೈತ್ರಿ ವಿಚಾರ ಹೇಳುವವರೆಗೆ ನಾನು ಕಾಮೆಂಟ್ ಮಾಡೋದ್ದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಹೆಚ್ಚಾಯ್ತು ಖಾಸಗಿ ಸಾರಿಗೆ ಕಿಚ್ಚು : ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಗಾರರ ಜಮಾವಣೆ

ನವದೆಹಲಿಯಲ್ಲಿ ನಡೆದ G-೨೦ ಶೃಂಗ ಸಭೆಯ ಬಗ್ಗೆ ಮಾತನಾಡಿದ ಅವರು, ಭಾರತದ 75 ವರ್ಷದ ಇತಿಹಾಸದಲ್ಲಿಇದು ಬಾರಿ ದೊಡ್ಡ ಮೈಲುಗಲ್ಲಾಗಿದೆ. ಆಫ್ರಿಕನ್ ಒಕ್ಕೂಟ ಒಗ್ಗೂಡಿಸಲು ಭಾರತದ ಪ್ರಪೋಸಲ್ ಬಂದಾಗ ಎಲ್ಲ ದೇಶಗಳು ಅದನ್ನು ಸ್ವೀಕಾರ ಮಾಡಿದ್ದಾರೆ. ಮಧ್ಯ ಪ್ರಾಚ್ಯ ಹೊಸ ಕಾರಿಡಾರ್ ನಿರ್ಮಾಣಕ್ಕೆ ದೇಶಗಳು ಒಪ್ಪಿಗೆ ಸೂಚಿಸಿವೆ. ಮುಖ್ಯವಾಗಿ ಯಾವುದೇ ಭಿನ್ನಾಭಿಪ್ರಾಯ ಬಾರದಂತೆ ಡಿಕ್ಲರೇಷನ್ ಮಾಡಿದ್ದೆ ಬಹು ದೊಡ್ಡ ಸಾಧನೆಯಾಗಿದೆ. ಭಾರತ ನೀಡಿದ ಎಲ್ಲಾ ಸಲಹೆಗಳನ್ನು ಮಾನ್ಯ ಮಾಡಿದ್ದಾರೆ. ಭಾರತ ನೇತೃತ್ವವನ್ನು ವಿದೇಶಗಳು ಒಪ್ಪುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ‘ರಾಜಕಾರಣ ನಿಂತ ನೀರಲ್ಲ, ಕೆಲವು ಉದ್ದೇಶಕ್ಕಾಗಿ ಕೆಲ ನಿರ್ಧಾರ ತೆಗೆದುಕೊಳ್ಳಬೇಕು’

ಇನ್ನೂ ಮುಂದುವರೆದು ಮಾತಂದಿರುವ ಅವರು, ಕಾಂಗ್ರೆಸ್ ಪಕ್ಷಕ್ಕೆ, ಅದರ ನಾಯಕರಿಗೆ ದಾರಿದ್ರ್ಯತೆ ಬಂದಿದೆ. ಜಗತ್ತು ಭಾರತವನ್ನು ಹೋಗೋಳುತ್ತಿದೆ, ಆದರೆ ಕಾಂಗ್ರೆಸ್ ಮಾತ್ರ ತೆಗಳುತ್ತಿದೆ. ಇದು ಮಾನಸಿಕ ರೋಗ, ದೇಶಕ್ಕೆ ಒಳ್ಳೆಯದಾದ್ರೆ ಅದನ್ನು ಸಹಿಸೋಕೆ ಆಗದ ಸ್ಥಿತಿಗೆ ಕಾಂಗ್ರೆಸ್ ನವರು ಬಂದು ತಲುಪ್ಪಿದ್ದಾರೆ. ಮೋದಿ ವಿರೋಧ ಮಾಡುವ ಭರದಲ್ಲಿ ದೇಶವನ್ನೇ ವಿರೋಧ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles