ಜೇವರ್ಗಿ: ದೇಶದ ರಕ್ಷಣೆಗೆ ಹಿಂದೂ ಯುವಕರು ಕಂಕಣ ಬದ್ಧರಾಗಬೇಕಾಗಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ನಿಮಿತ್ತ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಂಡ ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿ, ಭಾರತದಲ್ಲಿ ಗೋಹತ್ಯೆ ಹಾಗೂ ಮತಾಂತರ ತಡೆಗೆ ಹಿಂದೂಪರ ಸಂಘಟನೆಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅಧಿಕಾರಲ್ಲಿರಬೇಕು. ಶ್ರೀರಾಮ ಆದರ್ಶ ಪುರುಷ. ಯಡ್ರಾಮಿ ಪಟ್ಟಣ ಪುಣ್ಯಕ್ಷೇತ್ರ. ಈ ನಾಡಿನಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ಒಂದು ತಿಂಗಳ ಪರ್ಯಂತ ಪ್ರವಚನ ನೀಡಿದ್ದರು. ಸ್ವಾಮಿ ವಿವೇಕಾನಂದರ ಜೀವನ ಸಾಧನೆಗಳನ್ನು ಇಂದಿನ ಯುವಕರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇನ್ನು ಒಂದು ತಲವಾರ್ ಇಟ್ಟುಕೊಂಡರೆ ಒಂದು ಎಫ್ ಐಆರ್ ಹಾಕುವುದಿಲ್ಲ, ಆಯುಧ ಪೂಜೆ ದಿನದಂದು ಖಡ್ಗ, ಭರ್ಚಿಗಳಿಗೆ ಹಾಗೂ ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂದೂಕಿನ ಪೂಜೆ ಯಾವ ರೀತಿ ಸಲ್ಲಿಸುತ್ತಾರೆ ಅದೇ ರೀತಿಯಾಗಿ ಹಿಂದೂಗಳ ಮನೆಯಲ್ಲಿ ಮಾಡಬೇಕು ಎಂದಿದ್ದರು.