ಚಿಕ್ಕೋಡಿ: ಬುದ್ದಿ ಜೀವಿಗಳು ಭಾರತ ದೇಶದಲ್ಲಿ ಹುಟ್ಟಿದ್ದು ಕಳಂಕ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶಿಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತಿರುಪತಿಗೆ ಹೋಗಿ ಪ್ರಾರ್ಥನೆ ಮಾಡಿದ್ದಕ್ಕೆ ವ್ಯಂಗ್ಯವಾಡಿ ನಟ ಪ್ರಕಾಶ್ ಟ್ವೀಟ್ ಮಾಡಿದರು, ನಟ ಪ್ರಕಾಶ ರಾಜ್ ಕೆಟ್ಟದಾಗಿ ಮಾತನಾಡಿದ್ದರು, ವಿಜ್ಞಾನಿಗಳು ಸಾಧನೆ ಮಾಡಿದ್ದು ಪ್ರಕಾಶ ರಾಜ್ ಮುಖದ ಮೇಲೆ ಉಗುಳಿದ ಹಾಗೆ ಆಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಮುಂದಿನ ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ : ಶಕ್ತಿಕಾಂತ್ ದಾಸ್
ಭಾರತ ಆಸ್ತಿಕರ ನಂಬಿಕೆ ಇರುವ ಧಾರ್ಮಿಕ ಸಂಪ್ರದಾಯದ ದೇಶ, ನಿಮ್ಮಂಥವರು ಇಲ್ಲಿ ಹುಟ್ಟುಬಾರದಿತ್ತು ಚೀನಾದಲ್ಲಿ ಹುಟ್ಟಬೇಕಿತ್ತು ಅಲ್ಲಿ ನಾಸ್ತಿಕರಿದ್ದಾರೆ ಎಂದರು. ವಿಜ್ಞಾನ ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು, ದೇಹ ಮತ್ತು ಹೃದಯ ಇದ್ದ ಹಾಗೆ ಇಂಥ ದೇಶದಲ್ಲಿ ನಿಮ್ಮಂಥ ಬುದ್ದಿ ಜೀವಿಗಳು ಹುಟ್ಟಿದ್ದು ದೊಡ್ಡ ಕಳಂಕ , ವಿಜ್ಞಾನದಲ್ಲಿ ಸಿಗುವ ಫಲ ದೇವರ ಮೇಲೆ ಬಿಟ್ಟಿದ್ದು ಎಂದು ಬುದ್ದಿ ಜೀವಿಗಳು ತಿಳಿದುಕೊಳ್ಳಬೇಕು, ನಿಮ್ಮಂಥವರು ನಮ್ಮ ದೇಶದಲ್ಲಿ ಹುಟ್ಟಬಾರದಿತ್ತು ನೀವು ದೇಶಕ್ಕೆ ಕಳಂಕ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.