Thursday, June 8, 2023
spot_img
- Advertisement -spot_img

ಸುನೀಲ್ ಕುಮಾರ್‌ರನ್ನು ಗೆಲ್ಲಿಸಿ ಮತ್ತೆ ಮುಠ್ಠಾಳರಾಗುವಿರಾ ?: ಪ್ರಮೋದ್ ಮುತಾಲಿಕ್

ಉಡುಪಿ: ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಠ್ಠಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಠ್ಠಾಳರಾಗುವಿರಾ ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಪೋಸ್ಟರ್ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ನ್ನು ನೋಡಿದ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಆಕ್ರೋಶಿಸಿದ್ದಾರೆ. ಕಾರ್ಕಳ ಮತದಾರರಿಗೆ ಅವಮಾನವಾಯ್ತು. ಇದರ ಫಲ ನೀವು ಫಲಿತಾಂಶದ ದಿನ ಅನುಭವಿಸ್ತೀರಿ. ಯಾರದ್ದೊ ಕುಮ್ಮಕ್ಕಿನಿಂದ ಯಾರದ್ದೋ ದುಡ್ಡು ತೆಗೆದುಕೊಂಡು ಎಲ್ಲಿಂದಲೋ ಕಾರ್ಕಳಕ್ಕೆ ಬಂದಿದ್ದೀರಿ. ಈ ಬಾರಿ ಕಾರ್ಕಳದಲ್ಲಿ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಚುನಾವಣೆ ಸಮೀಪದಲ್ಲಿದ್ದು, ರಾಜಕೀಯ ವ್ಯಕ್ತಿಗಳ ಟಾಕ್ ವಾರ್ ನಡೆಯುತ್ತಲೇ ಇರುತ್ತದೆ, ಇದೀಗ ಕಾರ್ಕಳದಲ್ಲೀಗ ಪ್ರಮೋದ್ ಮುತಾಲಿಕ್ ಹಾಗೂ ಸಚಿವ ಸುನೀಲ್ ಕುಮಾರ್ ವಿರುದ್ಧ ಪೋಸ್ಟ್ ಹಂಚಿಕೊಂಡಿದ್ದಾರೆ. ಅಂದಹಾಗೇ ಈ ಪೋಸ್ಟ್ಗೆ ಸುನೀಲ್ ಕುಮಾರ್ ಅಭಿಮಾನಿಗಳು, ಬಿಜೆಪಿಯವರು ಆಕ್ರೋಶಿಸಿದ್ದಾರೆ.

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಬಾರಿಯ ಚುನಾವಣೆಯಲ್ಲಿ ಇಂಧನ ಸಚಿವ ಸುನೀಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ನಿರ್ಧರಿಸಿದ್ದಾರೆ. ಡೋಂಗಿ ಹಿಂದೂವಾದ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾನು ಬಂದಿದ್ದೇನೆ. ಅಸಲಿ ಹಿಂದುತ್ವ ತೋರಿಸಿ ಕೊಡಲು ಕಾರ್ಕಳಕ್ಕೆ ಬಂದಿದ್ದೇನೆ ಎಂದಿದ್ದರು.

Related Articles

- Advertisement -spot_img

Latest Articles