ಬೆಂಗಳೂರು : ಇಷ್ಟು ದಿನ ನಾನು ಸಾಮಾಜಿಕ ಹೋರಾಟಗಾರನಾಗಿದ್ದೆ, ಇನ್ಮುಂದೆ ರಾಜಕೀಯದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಆಸೆ ಇದೆ ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಲ್ಲಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರಾಜಕೀಯವಾಗಿ ನಾನು ಬೆಳೆಯಬೇಕು, ಮುಂದೆ ಬರಬೇಕು, ಶೇ.100 ರಷ್ಟು ನಾನು ಅದರಲ್ಲಿ ತೊಡಗಿಸಿಕೊಂಡು ಬೆಳೆಯಬೇಕು, ಇಷ್ಟು ದಿನ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದೆ ಇನ್ಮುಂದೆ ರಾಜಕೀಯವಾಗಿ ಗುರುತಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ರಾಜಕೀಯವಾಗಿ ತೊಡಗಿಸಿಕೊಳ್ಳಬೇಕು ಅಂದುಕೊಂಡಿದ್ದೀರಿ ಎಮೋಷನಲ್ ಆಗಬೇಡಿ, ಪ್ರಾಮಾಣಿಕರಾಗಿರಿ ಎಂದು ಕಿಚ್ಚ ಸುದೀಪ್ ಸಲಹೆ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 9 ಹನ್ನೆರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ದೊಡ್ಮನೆಯಿಂದ ಪ್ರಶಾಂತ್ ಸಂಬರ್ಗಿ ಅವರು ಹೊರ ನಡೆದಿದ್ದಾರೆ.ಬಿಗ್ ಬಾಸ್ ಸೀಸನ್ 9ರಲ್ಲಿ ಪ್ರಶಾಂತ್ ಸಂಬರ್ಗಿ ಅವರಿಗೆ ಮತ್ತೆ ಚಾನ್ಸ್ ಸಿಕ್ಕಿತು. ಇದು ಕೆಲವರಲ್ಲಿ ಖುಷಿ ಮೂಡಿಸಿದರೆ, ಮತ್ತೆ ಕೆಲವರಲ್ಲಿ ಬೇಸರ ಉಂಟುಮಾಡಿತ್ತು.
ಟಾಸ್ಕ್ ವಿಚಾರದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಯ ಪ್ರತಿ ಸದಸ್ಯನಿಗೂ ಟಫ್ ಕಂಟೆಸ್ಟಂಟ್ ಆಗಿದ್ದರು.ಬಿಗ್ ಬಾಸ್ ಸೀಸನ್ 9 ಸದ್ಯ ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯ ಹಂತ ಕೂಡ ತಲುಪಲಿದೆ.